ಅಸನಿ ಚಂಡಮಾರುತ ಎಫೆಕ್ಟ್: ಆಂಧ್ರದ ಕರಾವಳಿಗೆ ತೇಲಿ ಬಂದ ಚಿನ್ನದ ರಥ !

Prasthutha|

ಶ್ರೀಕಾಕುಳಂ: ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಸುನ್ನಪಲ್ಲಿ ಕಡಲಿನಲ್ಲಿ ರಥವೊಂದು ತೇಲಿ ಬಂದ ಘಟನೆ ನಡೆದಿದ್ದು, ಚಿನ್ನದ ತೇರು ಕಂಡು ಸಾರ್ವಜನಿಕರು ಅಚ್ಚರಿಗೊಂಡರು.

- Advertisement -

ಅಸನಿ ಚಂಡಮಾರುತ ಪ್ರಭಾವದಿಂದ ಸಮುದ್ರದಲ್ಲಿ ಎತ್ತರದ ಅಲೆಗಳು ಕಾಣಿಸಿಕೊಂಡಿವೆ. ಸಮುದ್ರದ ತೀರದಲ್ಲಿರುವ ಯಾವುದಾದರೂ ದೇವಸ್ಥಾನಕ್ಕೆ ಅಲೆಗಳು ಅಪ್ಪಳಿಸಿರಬಹುದು, ಆಗ ಅಲ್ಲಿದ್ದ ರಥ ಸಮುದ್ರಕ್ಕೆ ಬಂದಿರಬಹುದು ಎಂದು ಮೀನುಗಾರರು ಮತ್ತು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಸಮುದ್ರದಲ್ಲಿ ರಥವು ತೇಲುತ್ತಿರುವ ದೃಶ್ಯವಿರುವ ವಿಡಿಯೊ ವೈರಲ್ ಆಗಿದೆ. ಸ್ಥಳೀಯ ಮೀನುಗಾರರು ಹಗ್ಗ ಕಟ್ಟಿ ರಥವನ್ನು ಸಮುದ್ರದಿಂದ ದಡಕ್ಕೆ ಎಳೆದು ತಂದರು.

 ಸಮುದ್ರದಲ್ಲಿ ತೇಲಿ ಬಂದ ತೇರು ನೋಡಲು ಅಕ್ಕಪಕ್ಕದ ಹಳ್ಳಿಗಳ ನೂರು ಮಂದಿ ನೆರೆದಿದ್ದರು. ಅಂಡಮಾನ್ ಸಮೀಪ ಇರುವ ಯಾವುದಾದರೂ ಬೌದ್ಧ ಚೈತ್ಯಾಲಯಕ್ಕೆ ಈ ತೇರು ಸೇರಿರಬಹುದು. ಬಹುಶಃ ಮ್ಯಾನ್ಮಾರ್, ಥಾಯ್ಲೆಂಡ್, ಮಲೇಷಿಯಾ ಅಥವಾ ಇಂಡೋನೇಷಿಯಾದಿಂದ ಈ ರಥ ಕೊಚ್ಚಿಕೊಂಡು ಬಂದಿರಬಹುದು ಎಂದು ಹೇಳಲಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಥವನ್ನು ಪರಿಶೀಲಿಸಲಾಗುತ್ತಿದೆ.

Join Whatsapp