ಕಣ್ಣಿನ ಔಷಧಿಯಲ್ಲಿ ರಾಸಾಯನಿಕ ಮಿಶ್ರಣ ಮಾಡಿ ವೃದ್ಧ ಮಹಿಳೆಯ ಮನೆ ದರೋಡೆ

Prasthutha|

ತೆಲಂಗಾಣ: ವೃದ್ಧ ಮಹಿಳೆಯೊಬ್ಬರನ್ನು ಆರೈಕೆ ಮಾಡಲು ನೇಮಿಸಲಾಗಿದ್ದ ಮನೆಕೆಲಸದಾಕೆ, ಮನೆಯೊಡತಿಯ ಕಣ್ಣಿಗೆ ಹಾಕುವ ಔಷಧದಲ್ಲಿ ಶೌಚಾಲಯ ಶುಚಿಗೊಳಿಸುವ ರಾಸಾಯನಿಕ ಬೆರೆಸಿ ಸಿಂಪಡಿಸಿದ ಬಳಿಕ ಮನೆಯಲ್ಲಿದ್ದ ಆಭರಣಗಳನ್ನು ದರೋಡೆ ಮಾಡಿ ನಾಪತ್ತೆಯಾಗಿರುವ ಪ್ರಕರಣ ತೆಲಂಗಾಣದ ನಚಾರಂ ಎಂಬಲ್ಲಿರುವ ಸ್ನೇಹಪುರಿ ಕಾಲೋನಿಯಲ್ಲಿ ನಡೆದಿದೆ.
ವೃದ್ಧೆ ಹೇಮಾವತಿ [73] ಎಂಬುವವರ ಮನೆಯಲ್ಲಿ ಘಟನೆ ನಡೆದಿದ್ದು, ಹೇಮಾವತಿ ಅವರನ್ನು ಆರೈಕೆ ಮಾಡಲು ನೇಮಿಸಲಾಗಿದ್ದ ಭಾರ್ಗವಿ [ 32] ಎಂಬಾಕೆ ಕಣ್ಣಿಗೆ ಔಷಧಿ ಹಾಕುವ ನೆಪದಲ್ಲಿ ರಾಸಾಯನಿಕ ಮಿಶ್ರಿತ ಔಷಧಿ ಸಿಂಪಡಿಸಿದ ಪರಿಣಾಮ ವೃದ್ಧೆ ಹೇಮಾವತಿ ಅವರು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ಭಾರ್ಗವಿ, ಮನೆಯಲ್ಲಿದ್ದ ಅಪಾರ ಪ್ರಮಾಣದ ಒಡವೆ ಹಾಗೂ 40 ಸಾವಿರಕ್ಕೂ ಅಧಿಕ ನಗದಿನ ಜೊತೆ ಪರಾರಿಯಾಗಿದ್ದಳು.
ಪ್ರಕರಣ ದಾಖಲಿಸಿಕೊಂಡಿರುವ ನಚಾರಂ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಭಾರ್ಗವಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

Join Whatsapp