ಭಾರತೀಯರಿಗೆ ವಸತಿ ಮತ್ತು ಆಹಾರ ನೀಡಿದ್ದು ನಾವು, ನೀವಲ್ಲ ಎಂದ ರೊಮಾನಿಯಾ ಮೇಯರ್ : ಕೇಂದ್ರ ಸಚಿವ ಸಿಂಧಿಯಾಗೆ ಬಹಿರಂಗ ಮುಖಭಂಗ !

Prasthutha|

ರೊಮೇನಿಯಾ: ಉಕ್ರೇನ್ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಆಹಾರ, ವಸತಿಯ ವ್ಯವಸ್ಥೆಗೊಳಿಸಿರುವುದು ನಾವು ನೀವಲ್ಲ ಎಂದು ರೊಮೇನಿಯಾ ಮೇಯರ್ ತಿಳಿಸಿದ್ದಾರೆ. ಇವರ ಹೇಳಿಕೆಯಿಂದ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಸಾರ್ವಜನಿಕವಾಗಿ ಬಹಿರಂಗ ಮುಖಭಂಗಕ್ಕೊಳಗಾಗಿದ್ದಾರೆ.

- Advertisement -

‘ಅಪರೇಷನ್ ಗಂಗಾ’ ಹಿನ್ನೆಲೆಯಲ್ಲಿ ರೊಮೇನಿಯಾ ಪ್ರವಾಸದಲ್ಲಿರುವ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಸಚಿವ ಸಿಂಧಿಯಾ ಸಂತ್ರಸ್ತರಿಗೆ ಆಹಾರ, ವಸತಿ ಕಲ್ಪಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ರೊಮೇನಿಯನ್ ಮೇಯರ್ ಸಚಿವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಕ್ರಿಯಿಸಿದ್ದಾರೆ. ಸದ್ಯ ಈ ವೀಡಿಯೋದಲ್ಲಿ ಕೇಂದ್ರ ಸಚಿವ ಸಿಂಧ್ಯಾ ಮಾತನಾಡುವಾಗ ಮಧ್ಯಪ್ರವೇಶಿಸಿದ ರೊಮೇನಿಯಾ ಮೇಯರ್, ‘ ನಾವು ಭಾರತೀಯ ವಿದ್ಯಾರ್ಥಿಗಳಿಗೆ ಆಹಾರ ಮತ್ತು ವಸತಿ ಕಲ್ಪಿಸಿದ್ದೇವೆಯೇ ಹೊರತು ನೀವಲ್ಲ’ ಎಂದು ಸಚಿವ ಸಿಂಧ್ಯಾರನ್ನು ತರಾಟೆಗೆ ತೆಗೆದಿರುವುದು ವೈರಲ್ ವೀಡಿಯೋದಲ್ಲಿ ಸೆರೆಯಾಗಿದೆ. ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಮಧ್ಯೆ ತೀವ್ರ ಮುಜುಗರಕ್ಕೊಳಗಾದ ಕೇಂದ್ರ ಸಚಿವ ಸಿಂಧ್ಯಾ, ಭಾರತೀಯ ವಿದ್ಯಾರ್ಥಿಗಳಿಗೆ ನೆರವಾದ ರೊಮೇನಿಯಾ ಅಧಿಕಾರಿಗಳಿಗೆ ಧನ್ಯವಾದ ಸಮರ್ಪಿಸುತ್ತಿರುವುದು ವೀಡಿಯೋದಲ್ಲಿದೆ.

- Advertisement -

ಉಕ್ರೇನ್ ಸುತ್ತಮುತ್ತಲಿನ ದೇಶಗಳಿಗೆ ತಲುಪಿರುವ ಭಾರತೀಯ ವಿದ್ಯಾರ್ಥಿಗಳನ್ನು ಆಪರೇಶನ್‌ ಗಂಗಾ ಮೂಲಕ ಭಾರತಕ್ಕೆ ಕರೆ ತರುವ ಯೋಜನೆಯ ಮೇಲ್ವಿಚಾರಣೆ ನಡೆಸಲು ಭಾರತದ ನಾಲ್ವರು ಸಚಿವರನ್ನು ಉಕ್ರೇನ್‌ ನೆರೆ ರಾಷ್ಟ್ರಗಳಿಗೆ ಕಳುಹಿಸಲಾಗಿದೆ.ಇದರಿಂದಾಗಿ ಸಚಿವ ಸಿಂಧಿಯಾ ರೊಮೇನಿಯಾದಲ್ಲಿದ್ದಾರೆ.

ಈ ನಡುವೆ ಸ್ವಾರಸ್ಯಕರ ವಿಡಿಯೋ ಸಾಕಷ್ಟು ವೈರಲ್‌ ಆಗಿದ್ದು, ಜನರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಿಂಧಿಯಾ ಅವರು ರೊಮೇನಿಯನ್ ಅಧಿಕಾರಿಯೊಂದಿಗೆ ದುರಹಂಕಾರದಿಂದ ಮಾತನಾಡಿರುವುದು, ಭಾರತೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಾಯ ಪಡೆಯಲು ತೊಂದರೆಯಾಗಬಹುದು ಎಂದು ಟ್ವಿಟರ್‌ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಜನರು ಕಷ್ಟದಲ್ಲಿರುವಾದ ಈ ವಿಷಯವನ್ನು ರಾಜಕೀಯದ ಅಸ್ತ್ರವನ್ನಾಗಿಸುವುದು ಸರಿಯಲ್ಲ ಎಂದು ಇನ್ನೊಬ್ಬ ನೆಟ್ಟಿಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp