ಬೇಲೂರು । ಮುಸ್ಲಿಮರಿಲ್ಲದೆ ನಾವೆಲ್ಲ ಅಪೂರ್ಣ; ಸಂಘಪರಿವಾರದ ಕೋಮುವಾದವನ್ನು ಖಂಡಿಸಿದ ರೈತ

Prasthutha|

ಬೇಲೂರು: ಆರ್ಥಿಕ ಬಹಿಷ್ಕಾರ ಸೇರಿದಂತೆ ಇನ್ನಿತರ ಕಿರುಕುಳದ ಮೂಲಕ ಕರ್ನಾಟಕದಲ್ಲಿ ಮುಸ್ಲಿಮರನ್ನು ಪ್ರತ್ಯೇಕಿಸುವ ಸಂಘಪರಿವಾರದ ಪ್ರಯತ್ನದ ಮಧ್ಯೆ ಬೇಲೂರಿನ ರೈತರು ಮುಸ್ಲಿಮರ ಬೆಂಬಲಕ್ಕೆ ನಿಂತಿದ್ದು, ಮುಸ್ಲಿಮರು ಬೇಲೂರಿನಲ್ಲಿ 1000 ಹಿಂದೂಗಳನ್ನು ರಕ್ಷಿಸಿದ್ದಾರೆ. ನಮ್ಮೊಂದಿಗೆ ಬದುಕಲು ಮುಸ್ಲಿಮರಿಗೆ ಎಲ್ಲಾ ಹಕ್ಕುಗಳಿವೆ. ಅವರು ಕೂಡ ನಮ್ಮ ಸಹೋದರರು. ನಾನೊಬ್ಬ ರೈತನಾಗಿದ್ದು, ಮುಸ್ಲಿಮನಿಲ್ಲದ ನಾನು ಅಪೂರ್ಣ ಎಂದು ರೈತನೊಬ್ಬ ತಿಳಿಸಿದ್ದಾರೆ.

- Advertisement -

ಈ ಕುರಿತು ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸೆರೆಯಾಗಿದೆ

ದೇವಸ್ಥಾನದ ಆವರಣದಲ್ಲಿ ಮುಸ್ಲಿಮ್ ವ್ಯಾಪಾರಿಗಳು ವ್ಯವಹಾರ ನಡೆಸದಂತೆ ತಡೆಯುವ ಕೃತ್ಯವನ್ನು ರೈತನೊಬ್ಬ ಖಂಡಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೋಮು ಧ್ರುವೀಕರಣಕ್ಕೆ ಕರ್ನಾಟಕದಲ್ಲಿ ಅವಕಾಶ ನೀಡುವುದಿಲ್ಲ. ಇದರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಜರುಗಿಸಬೇಕೆಂದು ರೈತ ಆಗ್ರಹಿಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

- Advertisement -

ಸಂಘಪರಿವಾರದವರು ಇಲ್ಲಿ ಧ್ರುವೀಕರಣಕ್ಕೆ ಯತ್ನಿಸಿದರೆ, ಅದರ ವಿರುದ್ಧ ಗಂಭೀರ ಕ್ರಮ ತೆಗೆದುಕೊಳ್ಳುತ್ತೇವೆ. ಇಲ್ಲಿ ಮುಸ್ಲಿಮರು, ಹಿಂದೂಗಳು, ಕ್ರಿಶ್ಚಿಯನ್ ಸಮುದಾಯ ಇಲ್ಲಿ ಶಾಂತಿಯುತವಾಗಿ ಜೀವಿಸುತ್ತಿದ್ದಾರೆ ಎಂದು ರೈತ ತಿಳಿಸಿದ್ದಾರೆ.

2023 ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗಳು ರಾಜ್ಯಕ್ಕೆ ಸಮೀಪಿಸುತ್ತಿರುವಾಗ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಘಟನೆಗಳು ಕಳೆದ ಕೆಲವು ತಿಂಗಳುಗಳಲ್ಲಿ ಹೆಚ್ಚಳಕ್ಕೆ ಸಾಕ್ಷಿಯಾಗಿದೆ.

Join Whatsapp