ಮೋದಿ ವಿರುದ್ಧ ಮಾನನಷ್ಟ ಕೇಸ್ ಹಾಕುತ್ತೇನೆ, ನ್ಯಾಯಾಲಯಗಳು ಎಷ್ಟು ವೇಗವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೋಡೋಣ: ರೇಣುಕಾ ಚೌಧರಿ

Prasthutha|

ನವದೆಹಲಿ: ಪ್ರಧಾನಿ ಮೋದಿ ವಿರುದ್ಧ ಮಾನನಷ್ಟ ಕೇಸ್ ಹಾಕುತ್ತೇನೆ ಎಂದು ಕಾಂಗ್ರೆಸ್ ನಾಯಕಿ, ಮಾಜಿ ಸಚಿವೆ ರೇಣುಕಾ ಚೌಧರಿ ಹೇಳಿದ್ದಾರೆ.

- Advertisement -


ನನ್ನನ್ನು ಮೋದಿ ಅವರು ಶೂರ್ಪನಖಿ ಎಂದು ಉಲ್ಲೇಖಿಸಿದ್ದಾರೆ. ಹೀಗಾಗಿ ನಾನು ಮೋದಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ನ್ಯಾಯಾಲಯಗಳು ಎಷ್ಟು ವೇಗವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೋಡೋಣ ಎಂದು ರೇಣುಕಾ ಚೌಧರಿ ಟ್ವೀಟ್ ಮಾಡಿ ತಿಳಿಸಿದ್ದಾರೆ.


2018ರ ರಾಜ್ಯಸಭಾ ಕಲಾಪದ ಹಳೆ ವಿಡಿಯೋದಲ್ಲಿ ಆಧಾರ್ ಕಾರ್ಡ್’ಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಹೇಳಿಕೆಗೆ ಸಂಸದೆ ರೇಣುಕಾ ಚೌಧರಿ ಜೋರಾಗಿ ನಗುತ್ತಿರುತ್ತಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, “ಸಭಾಪತಿಜೀ ರೇಣುಕಾಜೀ ಅವರಿಗೆ ನೀವು ನಗಲು ಬಿಡಿ. ರಾಮಾಯಣ ಧಾರಾವಾಹಿಯ ನಂತರ ಈ ರೀತಿಯ ನಗುವನ್ನು ಕೇಳುವ ಸೌಭಾಗ್ಯ ಇಂದು ನಮಗೆ ಒದಗಿ ಬಂದಿದೆ” ಎಂದು ವ್ಯಂಗ್ಯವಾಡುತ್ತಾರೆ.

- Advertisement -


ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಜನಾಂದೋಲನ

ಇದೇ ವೇಳೆ ಕಾಂಗ್ರೆಸ್ ಬೀದಿಗಿಳಿಯಲು ತೀರ್ಮಾನಿಸಿದೆ ಮತ್ತು ಇತರ ಪಕ್ಷಗಳನ್ನು ಸಂಪರ್ಕಿಸಲು ತೀರ್ಮಾನಿಸಿದೆ. ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಿದೆ. ಕಾನೂನು ಮತ್ತು ರಾಜಕೀಯವಾಗಿಯೂ ಹೋರಾಡುವುದಾಗಿ ಕಾಂಗ್ರೆಸ್ ಹೇಳಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಗುರುವಾರ ಸಂಜೆ ಪಕ್ಷದ ಹಿರಿಯ ನಾಯಕರ ಸಭೆ ನಡೆಸಿದರು. ತೀರ್ಮಾನದಂತೆ ಮಾರ್ಚ್ 24ರ ಶುಕ್ರವಾರ ವಿಜಯ ಚೌಕದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು ಪ್ರತಿಪಕ್ಷಗಳ ನಾಯಕರ ಜೊತೆಗೆ ಒಂದು ಸಭೆ ನಡೆಸಿದರು. ಎಲ್ಲ ಪಕ್ಷಗಳ ಪ್ರತಿನಿಧಿಗಳು ರಾಷ್ಟ್ರಪತಿ ದ್ರೌಪದಿ ಮುರ್ಮುರವರನ್ನು ಭೇಟಿಯಾಗಿ ಇಂದು ಶುಕ್ರವಾರ ಸಂಜೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.

ದಿಲ್ಲಿಯಲ್ಲದೆ ದೇಶದ ನಾನಾ ಕಡೆ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಜೈರಾಂ ರಮೇಶ್ ಹೇಳಿದರು.

“ಮೋದಿ ಸರಕಾರದ ದ್ವೇಷದ ರಾಜಕಾರಣದ ಇನ್ನೊಂದು ಉದಾಹರಣೆ ಇದು. ನಾವು ಇದಕ್ಕೆಲ್ಲ ತಲೆ ಬಾಗುವುದಿಲ್ಲ, ಮತ್ತು ಎಲ್ಲ ಬಗೆಯ ಪ್ರತಿ ಹೋರಾಟ ನಡೆಸುತ್ತೇವೆ” ಎಂದೂ ಅವರು ಹೇಳಿದರು.

“ಇದು ದುರದೃಷ್ಟಕರ ತೀರ್ಪು, ನಾವು ಕಾಂಗ್ರೆಸ್ಸಿಗರೆಲ್ಲ ಒಗ್ಗಟ್ಟಿನಿಂದ ಇದ್ದೇವೆ. ರಾಹುಲ್ ಗಾಂಧಿಯವರು ಅದಾನಿ ವಿಷಯ ಎತ್ತಿದಾಗಿನಿಂದ ಮೋದಿಯವರ ಸರಕಾರವು ಅವರ ಮೇಲೆ ದ್ವೇಷ ಸಾಧಿಸುತ್ತಿದೆ” ಎಂದು ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಹೇಳಿದರು.

ಎಲ್ಲ ಪಕ್ಷಗಳಿಗೂ ವಿಷಯ ಮನದಟ್ಟಾಗಿದೆ ಎನ್ನುವುದು ಪ್ರತಿಪಕ್ಷಗಳ ವಿಚಾರದಲ್ಲಿ ಸಂತಸಕರ ಸಂಗತಿ ಎಂದೂ ಅವರು ತಿಳಿಸಿದರು.

Join Whatsapp