ತೆಲಂಗಾಣದಲ್ಲಿ ಬಾಲಕಿಯ ಅತ್ಯಾಚಾರಿಯನ್ನು ಹಿಡಿದು ಎನ್ ಕೌಂಟರ್ ಮಾಡುತ್ತೇವೆ: ಸಚಿವ ಮಲ್ಲಾ ರೆಡ್ಡಿ

Prasthutha|

ಹೈದರಾಬಾದ್: ಆರು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ ಅತ್ಯಾಚಾರಿಯನ್ನು ಹಿಡಿದು ಎನ್ ಕೌಂಟರ್ ಮಾಡಲಾಗುವುದು ಎಂದು ತೆಲಂಗಾಣದ ಕಾರ್ಮಿಕ ಮತ್ತು ಉದ್ಯೋಗಾವಕಾಶ ಮಂತ್ರಿ ಮಲ್ಲಾ ರೆಡ್ಡಿ ತಿಳಿಸಿದ್ದಾರೆ.
ಹೈದರಾಬಾದಿನಲ್ಲಿ ಆರು ವರ್ಷದ ಬಾಲಕಿಯ ಮಾನಭಂಗ ಮಾಡಿ ಕೊಲೆ ಮಾಡಲಾಗಿದೆ. ಆರೋಪಿಯ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಈ ಮಧ್ಯೆ ಸಚಿವರು ಈ ರೀತಿ ಹೇಳಿಕೆ ನೀಡಿರುವುದು ಚರ್ಚೆಗೆ ಕಾರಣವಾಗಿದೆ.


ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು ಪುಟ್ಟ ಬಾಲಕಿಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ಆರೋಪಿಯನ್ನು ಬಿಡುವ ಪ್ರಶ್ನೆಯೇ ಇಲ್ಲ. ನಾವು ಮನೆಯವರಿಗೆ ಮನನ ಮಾಡುತ್ತೇವೆ ಮತ್ತು ಸಂತ್ರಸ್ತೆಯ ಕುಟುಂಬದ ಭಾರವನ್ನು ಹೊರುತ್ತೇವೆ ಎಂದರು.
ಕಳೆದ ಗುರುವಾರ ಹೈದರಾಬಾದಿನ ಸಯ್ದಾಬಾದಿನಲ್ಲಿ 30 ವರ್ಷ ಪ್ರಾಯದ ನೆರೆಮನೆಯ ಯುವಕನೇ 6ರ ಬಾಲಕಿಯ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ. ಆರೋಪಿ ಪರಾರಿಯಾಗಿದ್ದು, ಬಂಧನ ಆಗದ್ದರ ವಿರುದ್ಧ ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕಳೆದ ವರ್ಷ ಪಶು ವೈದ್ಯೆಯೊಬ್ಬಳ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಹೈದರಾಬಾದಿನಲ್ಲಿ ಮೂವರನ್ನು ಎನ್ ಕೌಂಟರ್ ಮಾಡಲಾಗಿತ್ತು.

- Advertisement -