ಪತ್ನಿ ಆತ್ಮಹತ್ಯೆ: ಪತಿ, ಕುಟುಂಬದವರು ಪೊಲೀಸ್ ವಶಕ್ಕೆ

Prasthutha|

ಬೆಂಗಳೂರು: ಮಹಿಳೆಯೊಬ್ಬರ ಶವ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಸುದ್ದಗುಂಟೆಪಾಳ್ಯದಲ್ಲಿ ನಡೆದಿದೆ.

- Advertisement -


ಮೃತ ಮಹಿಳೆಯನ್ನು ಖತೀಜತುಲ್ ಕುಬ್ರಾ (29) ಎಂದು ಗುರುತಿಸಲಾಗಿದೆ. ಪತಿಯ ಮನೆಯವರೇ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಕತೀಜಾ ಕುಟುಂಬದವರು ಆರೋಪಿಸಿದ್ದಾರೆ.


ಪತ್ನಿಯನ್ನು ಹೊಡೆದು ನೇಣು ಹಾಕಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪತಿ ಮೆಹಬೂಬ್ ಪರೀಷ್, ಮಾವ ಹಾಗೂ ನಾದಿನಿಯನ್ನು ಸುದ್ದಗುಂಟೆ ಪಾಳ್ಯ ಪೊಲೀಸರು ವಶಕ್ಕೆ ಪಡೆದು ತನಿಖೆಯನ್ನು ಕೈಗೊಂಡಿದ್ದಾರೆ.

- Advertisement -


ಮೃತ ಮಹಿಳೆ ತಂದೆ ಜಾವೀದುಲ್ಲಾ ಖಾನ್ ಸುದ್ದಿಗಾರರೊಂದಿಗೆ ಮಾತನಾಡಿ, ಮದುವೆಯಾದಾಗಿನಿಂದ ಮಗಳ ಜೊತೆ ಪತಿ ಮನೆಯವರು ಜಗಳಮಾಡುತ್ತಿದ್ದು ನನ್ನ ಅಳಿಯನಿಗೆ ಇನ್ನೋರ್ವ ಮಹಿಳೆಯ ಜೊತೆ ಸಂಬಂಧವಿತ್ತು. ಹಾಗಾಗಿ ನನ್ನ ಮಗಳನ್ನ ಅಳಿಯನೇ ಕೊಂದಿದ್ದಾನೆ ಎಂದು ಆರೋಪಿಸಿದ್ದಾರೆ.


ನನ್ನ ಮಗಳಿಗೆ ಪ್ರತಿನಿತ್ಯ ಹೊಡೆಯುವುದು, ಕಿರುಕುಳ ನೀಡುತ್ತಿದ್ದ ಆಳಿಯನ ವಿರುದ್ಧ ದೂರು ನೀಡಿದ್ದು ಆತನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

Join Whatsapp