ರಾಮದೇವ್ ದೇಶದ ಜನರ ಕ್ಷಮೆಯಾಚಿಸಲಿ: ಸ್ವಾತಿ ಮಾಲಿವಾಲ್

Prasthutha|

ನವದೆಹಲಿ: ಸಾರ್ವಜನಿಕ ಸಮಾರಂಭವೊಂದರಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಯೋಗ ಗುರು ಬಾಬಾ ರಾಮದೇವ್ ವಿರುದ್ಧ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಕಿಡಿಕಾರಿದ್ದಾರೆ.

- Advertisement -

ಮಹಿಳೆಯರು ಸೀರೆ ಉಟ್ಟರೆ ಸುಂದರ, ಸಲ್ವಾರ್ ಕಮೀಜ್ ಧರಿಸಿದರೆ ಅತಿ ಸುಂದರ, ಬಟ್ಟೆಯನ್ನೇ ಧರಿಸದಿದ್ದರೆ ಇನ್ನೂ ಅಂದವಾಗಿ ಕಾಣಿಸುತ್ತಾರೆ ಎಂದು ಯೋಗ ಗುರು ಬಾಬಾ ರಾಮದೇವ್ ವೇದಿಕೆಯೊಂದರಲ್ಲಿ  ಮಹಾರಾಷ್ಟ್ರದ ಉಪಮುಖ್ಯಮಂತ್ರಿಯ  ಪತ್ನಿಯ ಮುಂದೆ ಹೇಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ವೀಡಿಯೋವನ್ನು ಹಂಚಿಕೊಂಡಿರುವ ಸ್ವಾತಿ ಮಾಲಿವಾಲ್, ಮಹಾರಾಷ್ಟ್ರದ ಉಪಮುಖ್ಯಮಂತ್ರಿಯ ಪತ್ನಿಯ ಮುಂದೆ ಮಹಿಳೆಯರ ಬಗ್ಗೆ ರಾಮದೇವ್ ನೀಡಿದ ಹೇಳಿಕೆಗಳು ಅಸಭ್ಯ ಮತ್ತು ಖಂಡನೀಯ. ಈ ಹೇಳಿಕೆಯಿಂದ ಮಹಿಳೆಯರ ಮನಸ್ಸಿಗೆ ನೋವಾಗಿದೆ. ಮಹಿಳೆಯರ ಬಗ್ಗೆ ಹಗುರ ಹೇಳಿಕೆ ನೀಡಿರುವ ರಾಮದೇವ್ ಕೂಡಲೇ ದೇಶದ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

- Advertisement -

ಥಾಣೆಯಲ್ಲಿ ಆಯೋಜಿಸಿದ್ದ ರಾಮದೇವ್ ಅವರ ಯೋಗ ಶಿಬಿರದಲ್ಲಿ  ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ, ಸಿ.ಎಂ ಏಕನಾಥ್ ಶಿಂಧೆ ಅವರ ಮಗ ಮತ್ತು ಸಂಸದ ಶ್ರೀಕಾಂತ್ ಶಿಂಧೆ ಕೂಡ ಹಾಜರಿದ್ದರು.

Join Whatsapp