TRS ಪಕ್ಷದಲ್ಲಿದ್ದಾಗ ಚಂದ್ರಶೇಖರ್ ರಾವ್ ಗಾಗಿ ದೇವಸ್ಥಾನ ಕಟ್ಟಿದವ ಬಿಜೆಪಿಗೆ ಸೇರಿದ ಮೇಲೆ ಸಾಲ ತೀರಿಸಲು ಅದನ್ನು ಮಾರಾಟಕ್ಕಿಟ್ಟ!

Prasthutha|

ಹೈದರಾಬಾದ್: ಅಭಿಮಾನಿಯೊಬ್ಬ ಸಾಲ ಮಾಡಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ದೇವಸ್ಥಾನವನ್ನು ನಿರ್ಮಿಸಿದ್ದು, ಬಿಜೆಪಿ ಸೇರಿದಾಗ ತನ್ನ ಸಾಲ ತೀರಿಸಲು ದೇವಸ್ಥಾನವನ್ನೇ ಮಾರಾಟಕ್ಕೆ ಇಟ್ಟಿದ್ದಾನೆ.

ಒಂದು ಕಾಲದಲ್ಲಿ ಕೆಸಿಆರ್ ಅವರ ಕಟ್ಟಾ ಅನುಯಾಯಿಯಾಗಿದ್ದ ಗುಂಡ ರವೀಂದರ್ ಎಂಬಾತ 2016 ರಲ್ಲಿ ಕೆಸಿಆರ್ ಅವರ ಅಮೃತಶಿಲೆಯ ಪ್ರತಿಮೆಯನ್ನು ಹೊಂದಿರುವ ದೇವಸ್ಥಾನವನ್ನು ಮಂಚೇರಿಯಲ್ ಜಿಲ್ಲೆಯಲ್ಲಿ ನಿರ್ಮಿಸಿದ್ದನು. ‘ತೆಲಂಗಾಣದ ಪ್ರೀತಿಯ ಮಗ ನಾಲ್ಕು ಕೋಟಿ ಜನರ ಭರವಸೆ’ ಎಂಬ ಬರಹಗಳನ್ನು ದೇವಸ್ಥಾನದ ಗೋಡೆಯ ಮೇಲೆ ಕೆತ್ತಲಾಗಿದ್ದು, ರವೀಂದರ್ ಮತ್ತು ಅವರ ಕುಟುಂಬ ಜನಪ್ರಿಯ ನಾಯಕನನ್ನು ದೇವರಂತೆ ಪೂಜಿಸುತ್ತಿದ್ದರು.

- Advertisement -

ದೇವಾಲಯ ನಿರ್ಮಿಸಲು 3 ಲಕ್ಷ ರೂ. ಸಾಲ ಮಾಡಿದ್ದ ರವೀಂದರ್ ಸಾಲಗಳನ್ನು ಮರುಪಾವತಿಸಲು ಅದನ್ನು ಮಾರಾಟ ಮಾಡುವುದಾಗಿ ತಿಳಿಸಿದ್ದಾನೆ. ಇತ್ತೀಚೆಗೆ ಬಿಜೆಪಿ ಸೇರಿದ್ದ ಅವನು ಕೆಸಿಆರ್ ಅವರ ದೇವಸ್ಥಾನವನ್ನು ಮಾರಾಟ ಮಾಡುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದಾನೆ.

- Advertisement -