ನಟಿ ಪಾಯಲ್ ಘೋಷ್ ಮೇಲೆ ಹಲ್ಲೆ, ಆ್ಯಸಿಡ್ ದಾಳಿಗೆ ಯತ್ನ !

Prasthutha|

ಮುಂಬೈ : ಮುಸುಕುಧಾರಿ ದುಷ್ಕರ್ಮಿಗಳ ಗುಂಪು ರಾಡ್ ​ನಿಂದ ಹಲ್ಲೆ ಮಾಡಿದ್ದಲ್ಲದೇ, ತನ್ನ ಮೇಲೆ ಆ್ಯಸಿಡ್ ದಾಳಿಗೂ ಯತ್ನ ನಡೆಸಿದ್ದಾರೆ ಎಂದು ಬಾಲಿವುಡ್ ನಟಿ ಪಾಯಲ್ ಘೋಷ್ ಆರೋಪಿಸಿದ್ದಾರೆ.

- Advertisement -


ಇತ್ತೀಚೆಗೆ ಚಿತ್ರ ನಿರ್ಮಾಪಕ ಅನುರಾಗ್‌ ಕಶ್ಯಪ್ ಮೇಲೆ ಅತ್ಯಾಚಾರದ ಆರೋಪ ಮಾಡಿ ನಟಿ ಪಾಯಲ್‌ ಸುದ್ದಿಯಲ್ಲಿದ್ದರು.


ನಿನ್ನೆ ರಾತ್ರಿ 10 ಗಂಟೆ ವೇಳೆ ಪಾಯಲ್ ಘೋಷ್ ಔಷಧಿ ತೆಗೆದುಕೊಂಡು ಬರುವ ಉದ್ದೇಶದಿಂದ ಮನೆಯಿಂದ ಹೊರಗಡೆ ಬಂದಿದ್ದರು. ಈ ವೇಳೆ ಕೆಲವರು ನನ್ನ ಮೇಲೆ ರಾಡ್ ​ನಿಂದ ಹಲ್ಲೆ ನಡೆಸಿದ್ದು, ಕೈಗೆ ಪೆಟ್ಟು ಬಿದ್ದಿದೆ. ಅವರು ಕೈಯಲ್ಲಿ ಬಾಟಲಿ ಹಿಡಿದುಕೊಂಡಿದ್ದರು. ಬಹುಶಃ ಅದು ಆ್ಯಸಿಡ್ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

- Advertisement -


ನಟಿ ಪಾಯಲ್ ಘೋಷ್ ಮೂಲತಃ ಪಶ್ಚಿಮ ಬಂಗಾಳದವರಾಗಿದ್ದು, ತೆಲಗು, ಕನ್ನಡ ಹಾಗೂ ಹಿಂದಿಯ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.



Join Whatsapp