ವಾಟ್ಸಾಪ್ ಚಾಟ್ ಅನ್ನು ಆರ್ಯನ್ ಖಾನ್ ವಿರುದ್ಧದ ಸಾಕ್ಷಿಯಾಗಿ ಪರಿಗಣಿಸಲು ಸಾಧ್ಯವಿಲ್ಲ: ಮುಂಬೈ ಹೈಕೋರ್ಟ್

Prasthutha|

ಮುಂಬೈ: ಕ್ರೂಸ್ ಹಡಗು ಡ್ರಗ್ಸ್ ಪ್ರಕರಣದಲ್ಲಿ ಆರೋಪಿ ಆರ್ಯನ್ ಖಾನ್ ವಿರುದ್ಧ ವಾಟ್ಸಾಪ್ ಚಾಟ್ ಅನ್ನು ಸಾಕ್ಷಿಯನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಮುಂಬೈ ಹೈಕೋರ್ಟ್ ತಿಳಿಸಿದೆ.

- Advertisement -

ನ್ಯಾಯಾಲಯವು ಆರ್ಯನ್ ಖಾನ್ ಗೆ ನೀಡಿದ ಜಾಮೀನು ಆದೇಶದ ವಿವರವಾದ ಆದೇಶದ ಪ್ರತಿ ಭಾನುವಾರ ಲಭ್ಯವಾಗಿದ್ದು, ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್.ಸಿ.ಬಿ) ಸಲ್ಲಿಸಿದ ದಾಖಲೆಗಳ ಬಗ್ಗೆ ತಗಾದೆ ಎತ್ತಿದೆ. ಮಾತ್ರವಲ್ಲ ಅವು ಕಟ್ಟುಕಥೆ ಮತ್ತು ಅನುಮಾನಾಸ್ಪದವಾಗಿ ತೋರುತ್ತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ನಾರ್ಕೋಟಿಕ್ಸ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ (ಎನ್ ಡಿಪಿಎಸ್) ಕಾಯ್ದೆ ಅಡಿಯಲ್ಲಿ ವಿಶೇಷ ನ್ಯಾಯಾಧೀಶ ವಿ ವಿ ಪಾಟೀಲ್ ಅವರು ಡ್ರಗ್ಸ್ ಪ್ರಕರಣದ ಇನ್ನೋರ್ವ ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ಅವರು, ಆರ್ಯನ್ ಖಾನ್ ಅವರೊಂದಿಗಿನ ವಾಟ್ಸಾಪ್ ಚಾಟ್ ಹೊರತುಪಡಿಸಿ ಕುಮಾರ್ ಅಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಆದೇಶ ನೀಡಿದರು.

- Advertisement -

ಕುಮಾರ್ ಅವರ ನಿವಾಸದಿಂದ 2.6 ಕೆಜಿ ಗಾಂಜಾವನ್ನು ವಶಪಡಿಕೊಂಡಿರುವುದಾಗಿ ಎನ್.ಸಿ.ಬಿ ನ್ಯಾಯಾಯಲಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು. ಮಾತ್ರವಲ್ಲ ಕುಮಾರ್ ಎಂಬವನು ಆರ್ಯನ್ ಮತು ಮರ್ಚೆಂಟ್ ಗೆ ಗಾಂಜಾ ಮತ್ತು ಚರಸ್ ಅನ್ನು ಪೂರೈಸುತ್ತಿದ್ದರು ಎಂದು ತಿಳಿಸಿದೆ.

ಈ ಮಧ್ಯೆ ಕುಮಾರ್ ಮತ್ತು ಆರ್ಯನ್ ನಡುವಿನ ವಾಟ್ಸಾಪ್ ಚಾಟ್ ಗಳಿಂದಾಗಿ ಅವರು ಡ್ರಗ್ಸ್ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವುದಕ್ಕೆ ನಮ್ಮ ಬಳಿ ಸಾಕ್ಷ್ಯವಿದೆ ಎಂದು ಎನ್.ಸಿ.ಬಿ ವಾದಿಸಿದೆ. ಕುಮಾರ್ ಪರ ಹಿರಿಯ ವಕೀಲರಾದ ಅಶ್ವಿನ್ ಥೂಲ್ ಅವರು ವಾದಿಸಿ, ಆತ ನಿರಪರಾಧಿ ಮತ್ತು ಆತನ ವಿರುದ್ಧದ ಎಲ್ಲಾ ಆರೋಪಗಳು ಸುಳ್ಳೆಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ವಕೀಲ ಅಶ್ವಿನ್ ಥೂಲ್ ಅವರು 22 ವರ್ಷದ ನಿರಪರಾಧಿ ಮತ್ತು ಅವರ ವಿರುದ್ಧದ ಎಲ್ಲಾ ಆರೋಪಗಳು ಸುಳ್ಳು ಎಂದು ವಾದಿಸಿದ್ದರು.

Join Whatsapp