ಇಂಧನ ಬೆಲೆ ಏರಿಕೆ ಖಂಡಿಸಿ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಸಂಚರಿಸಿದ ದೀದಿ

Prasthutha|

ಕೋಲ್ಕತ್ತಾ :  ಕೇಂದ್ರ ಸರ್ಕಾರದ ಇಂಧನ ಬೆಲೆ ಏರಿಕೆ ಖಂಡಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಸ್ಕೂಟರ್‍ನಲ್ಲಿ ಸಂಚರಿಸುತ್ತಾ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ದೇಶದಲ್ಲಿ ಇಂಧನ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ರಾಜ್ಯ ಕಾರ್ಯದರ್ಶಿ ನಬಣ್ಣಾ ಅವರೊಂದಿಗೆ ಮುಖ್ಯಮಂತ್ರಿಯವರು ಸ್ಕೂಟರ್‍ನಲ್ಲಿ ಕುಳಿತಿದ್ದರು.

- Advertisement -

ಇದರ ವಿಡಿಯೋ ಈಗ ವೈರಲ್ ಆಗಿದ್ದು, ಸಿಎಂ ಬ್ಯಾನರ್ಜಿ ಅವರು ಹೆಲ್ಮೆಟ್ ಧರಿಸಿ ಪೆಟ್ರೋಲ್ ಬೆಲೆ ಏರಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಅವರು ಪ್ರದರ್ಶನ ಫಲಕವನ್ನು ಕುತ್ತಿಗೆಗೆ ತೂಗು ಹಾಕಿಕೊಂಡು ಸ್ಕೂಟರ್‍ನಲ್ಲಿ ಹಜ್ರಾಮೋರ್ ನಿಂದ ಐದು ಕಿ.ಮೀ ದೂರದವರೆಗೆ ಪ್ರಯಾಣ ಮಾಡಿದ್ದಾರೆ.

- Advertisement -