ಡಿಜಿಟಲ್ ಸುದ್ದಿ ವಾಹಿನಿ, ಒಟಿಟಿಗಳ ನಿಯಂತ್ರಣಕ್ಕೆ ಸರಕಾರದ ಹೊಸ ನಿಯಮ ಪ್ರಕಟ
Prasthutha: February 25, 2021

ನವದೆಹಲಿ : ಆನ್ ಲೈನ್ ಮತ್ತು ಡಿಜಿಟಲ್ ಸುದ್ದಿತಾಣಗಳು, ಒಟಿಟಿ ಫ್ಲಾಟ್ ಫಾರಂಗಳನ್ನು ನಿಯಂತ್ರಿಸಲು ಕೇಂದ್ರ ಸರಕಾರ ಹೊಸ ನಿಯಮಗಳನ್ನು ಪ್ರಕಟಿಸಿದೆ. ಈ ನಿಯಮಗಳು ಸಾಮಾಜಿಕ ಮಾಧ್ಯಮ ಬಳಕೆದಾರರಿಗೂ ಅಧಿಕಾರ ಅನ್ವಯಿಸುತ್ತದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಡಿಜಿಟಲ್ ಸುದ್ದಿ ತಾಣಗಳು, ಒಟಿಟಿ ಫ್ಲಾಟ್ ಫಾರಂಗಳಗಳಿಗೆ ಮೂರು ಹಂತದ ಕುಂದು ಕೊರತೆ ಪರಿಹಾರ ಚೌಕಟ್ಟನ್ನು ಈ ನಿಯಮಗಳು ಒಳಗೊಂಡಿವೆ. ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಪರಿಣಾಮ ಬೀರುವ ವಿಷಯಗಳನ್ನು ನಿಷೇಧಿಸುವ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ನೀತಿ ಸಂಹಿತೆಯನ್ನು ಒಳಗೊಂಡ ಕಟ್ಟು ನಿಟ್ಟಾದ ಮೆಲ್ವಿಚಾರಣಾ ಕಾರ್ಯವಿಧಾನ ನೂತನ ನೀತಿ ಒಳಗೊಂಡಿದೆ.
ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ಮಾರ್ಗದರ್ಶಿ) ನಿಯಮಗಳು 2021 ಮೊದಲ ಬಾರಿಗೆ ಡಿಜಿಟಲ್ ಸುದ್ದಿ ಸಂಸ್ಥೆಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳು, ಒಟಿಟಿ ಸ್ಟ್ರೀಮಿಂಗ್ ಸೇವೆಗಳನ್ನು ಸರಕಾರ ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸೂಚಿಸುತ್ತದೆ.
ಈ ಕುರಿತ ಮೇಲ್ವಿಚಾರಣೆಗೆ ಸರಕಾರದ ವಿವಿಧ ಇಲಾಖೆಗಳ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ಒಳಗೊಂಡಿರುತ್ತದೆ. ಈ ಸಮಿತಿ ಬಯಸಿದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿ, ವಿಚಾರಣೆಗೆ ಕರೆಯಬಹುದು. ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆ ನೀಡಬಹುದು, ಶಿಕ್ಷಿಸಬಹುದು ಅಥವಾ ಕ್ಷಮಿಸಬಹುದು.
