ದ.ಕ ಸೇರಿದಂತೆ ಕೊಡಗು, ಹಾಸನದಲ್ಲಿ ವಾರಾಂತ್ಯ ಕರ್ಫ್ಯೂ ಮುಂದುವರಿಕೆ

Prasthutha|

► 6,7,8ನೇ ಭೌತಿಕ ತರಬೇತಿ ಆರಂಭಿಸಲು ಸಮ್ಮತಿ

- Advertisement -

ಬೆಂಗಳೂರು: ದ.ಕ ಸೇರಿದಂತೆ ಕೊಡಗು, ಹಾಸನದಲ್ಲಿ ವಾರಾಂತ್ಯ ಕರ್ಫ್ಯೂ ಮುಂದುವರಿಸಿ ಸರಕಾರ ಆದೇಶ ನಿಡಿದೆ. ಅದರಂತೆ ರಾಜ್ಯ ಸರ್ಕಾರ ಕೊನೆಗೂ ಶಾಲೆಗಳ ಭೌತಿಕ ತರಗತಿಗೆ ಆರಂಭಿಸಲು ಅವಕಾಶ ಕಲ್ಪಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಂದು ನಡೆದ ತಜ್ಞರು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯ ಬಳಿಕ ವಿವರ ನೀಡಿದ ಕಂದಾಯ ಸಚಿವ ಆರ್. ಅಶೋಕ, 6ರಿಂದ 8ನೇ ತರಗತಿಗಳನ್ನು ಆರಂಭಿಸಲು ತಜ್ಞರು ಸಲಹೆ ನೀಡಿದ್ದಾರೆ. ಅದರಂತೆ ಎಲ್ಲಾ ಮುನ್ನೆಚ್ಚರಿಕೆ ಕೈಗೊಂಡು ದಿನ ಬಿಟ್ಟು ದಿನ ತರಗತಿ ತೆರೆಯಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

- Advertisement -

ಕೇರಳ ರಾಜ್ಯದಿಂದ ಬರುವ ಜನರಿಗೆ ಕಡ್ಡಾಯವಾಗಿ ಒಂದು ವಾರ Institutional Quarantine ಕಡ್ಡಾಯಗೊಳಿಸಲಾಗುವುದು. ಏಳನೇ ದಿನ ಕೋವಿಡ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು, ಲಸಿಕೆ ಹಾಕಿಸಿದ್ದರೂ, ಕೋವಿಡ್ ನೆಗೆಟಿವ್ ಪುಮಾಣ ಪತ್ರ ಪಡೆದುಕೊಂಡಿದ್ದರೂ ಈ ಪ್ರಕ್ರಿಯೆ ಕಡಾಯವಾಗಿದೆ ಎಂದು ಅಶೋಕ ತಿಳಿಸಿದರು.

ಉಡುಪಿ, ಚಿಕ್ಕಮಗಳೂರು, ಹಾಸನ, ಮೈಸೂರು, ಶಿವಮೊಗ, ಕೋಲಾರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಶೇ. 1.5 ಕ್ಕಿಂತ ಕಡಿಮೆ ಇರುವ ಹಿನ್ನೆಲೆಯಲ್ಲಿ ಕೆಲವು ನಿರ್ಬಂಧಗಳನ್ನು ಸಡಿಲಿಸಲು ಪರಿಶೀಲಿಸಿ ಕ್ರಮ ವಹಿಸಲು ಸೂಚಿಸಲಾಯಿತು. ಕೊಡಗು, ಹಾಸನ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಹೊರತು ಪಡಿಸಿ, ಇತರ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ಸಡಿಲಿಸಲಾಗುವುದು ಎಂದು ಹೇಳಿದರು.

ಕೇರಳದಲ್ಲಿ ಪಾಸಿಟಿವಿಟಿ ದರ ಶೇ.19 ಕ್ಕೇರಿದ್ದು , ಪ್ರತಿದಿನ 30 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ನಿರ್ಬಂಧ ಮುಂದುವರಿಯಲಿದೆ. ಮದುವೆ ಮತ್ತಿತರ ಸಮಾರಂಭಗಳಿಗೆ ಕಲ್ಯಾಣ ಮಂಟಪಗಳಲ್ಲಿ ಗರಿಷ್ಠ 400 ಮಂದಿಯ ಮಿತಿಗೊಳಪಟ್ಟು ಶೇ. 50 ರಷ್ಟು ಹಾಜರಾತಿಗೆ ಅವಕಾಶ ಕಲ್ಪಿಸುವುದು. ಶೇ. 2 ಕ್ಕಿಂತ ಪಾಸಿಟಿವಿಟಿ ದರ ಕಡಿಮೆ ಇರುವ ತಾಲೂಕುಗಳಲ್ಲಿ 6 , 7 ಮತ್ತು 8 ನೇ ತರಗತಿಗೆ ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸಿ , ವಾರದಲ್ಲಿ 5 ದಿನ ಶಾಲೆ ತೆರೆಯಲಾಗುವುದು. ದಿನ ಬಿಟ್ಟು ದಿನ   ಶೇ . 50 ರ ಹಾಜರಾತಿಯೊಂದಿಗೆ ತರಗತಿಗಳು ನಡೆಯಲಿವೆ. ವಾರಾಂತ್ಯದಲ್ಲಿ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗುವುದು ಎಂದು ಹೇಳಿದರು.

 ಕಳೆದ ವಾರ 9 ರಿಂದ 12 ನೇ ತರಗತಿ ವರೆಗೆ ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಉತ್ತಮವಾಗಿದೆ.  2912 ಪಂಚಾಯಿತಿಗಳಲ್ಲಿ 0 ಪಾಸಿಟಿವಿಟಿ ಇದೆ , 6472 ಸ್ಯಾಂಪಲ್ ಸಂಗ್ರಹ ಮಾಡಲಾಗಿದ್ದು , 14 ಮಕ್ಕಳಲ್ಲಿ ಪಾಸಿಟಿವ್ ಬಂದಿದೆ . ಇದು ಅತ್ಯಂತ ಕಡಿಮೆ ಸಂಖ್ಯೆಯಲ್ಲಿದೆ ಎಂದು ಅಶೋಕ ಹೇಳಿದರು.

ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರ್.ಅಶೋಕ, ಮೂರನೇ ಅಲೆ ಬರುವ ಸಾಧ್ಯತೆ ಇದೆ. ನೆರೆಯ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ನಾವು ಎಚ್ಚರ ವಹಿಸಬೇಕಾಗಿದೆ . ಬೆಂಗಳೂರು ಮತ್ತು ಎಲ್ಲ ಜಿಲ್ಲೆಗಳ ಆಯುಕ್ತರು / ಜಿಲ್ಲಾಧಿಕಾರಿಗಳು ಹಾಗೂ ಎಸ್ ಪಿಗಳಿಂದ ನವೆಂಬರ್ 5 ನೇ ತಾರೀಖಿನೊಳಗೆ ವರದಿ ವಡೆದು , ಸಂಘಟಕರಿಂದ ಮುನ್ನೆಚ್ಚರಿಕೆ ಕ್ರಮಗಳ ಪಾಲನೆ ಕುರಿತು ಚರ್ಚಿಸಿ , ತಾಲೂಕು ಮಟ್ಟದಲ್ಲಿನ ಪ್ರಕರಣಗಳ ಸಂಖ್ಯೆ ಪರಿಶೀಲಿಸಿ , ತಜ್ಞರೊಂದಿಗೆ ಚರ್ಚಿಸಿ , ಸೆ.5 ರಂದು ಗಣೇಶೋತ್ಸವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.



Join Whatsapp