ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲವೆಂದು ನಾವು ಹೇಳಿಯೇ ಇಲ್ಲ: ಶಾಸಕ ಯು.ಟಿ ಖಾದರ್

Prasthutha|

ಉಡುಪಿ: ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲವೆಂದು ನಾವು ಹೇಳಿಯೇ ಇಲ್ಲಎಂದು ಕಾಂಗ್ರೆಸ್ ಶಾಸಕ ಯು.ಟಿ ಖಾದರ್ ಹೇಳಿದ್ದಾರೆ.

- Advertisement -

ಕಾಪುವಿನಲ್ಲಿ ನಡೆದ ಕಾಂಗ್ರೆಸ್  ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ನಾವು ಹೇಳಲಿಲ್ಲ. ಸಾವರ್ಕರ್ ಅವರಂತೆ ಸಾವಿರ ಜನ ಅಂಡಮಾನ್ ಜೈಲಿಗೆ ಹೋಗಿದ್ದಾರೆ. ಸಾವರ್ಕರ್ ಜೈಲಿನಲ್ಲಿ 10 ಕ್ಷಮಾಪಣಾ ಪತ್ರ ಬ್ರಿಟಿಷರಿಗೆ ಬರೆದು ನನ್ನದು ತಪ್ಪಾಗಿದೆ, ನೀವು ಹೇಳಿದಂತೆ ಕೇಳುತ್ತೇನೆ ಎಂದು ಅಲವತ್ತುಕೊಂಡಿದ್ದಾರೆ. ಹಾಗಾದರೆ ಕ್ಷಮಾಪಣಾ ಪತ್ರ ಬರೆದು ಹೊರಗೆ ಬಂದವರು ದೇಶಭಕ್ತರೇ ಎಂದು ಖಾದರ್ ಪ್ರಶ್ನಿಸಿದ್ದಾರೆ. ಬಿಜೆಪಿಯವರಿಗೆ ತಾಕತ್, ಧೈರ್ಯ ಇದ್ದರೆ ಅಖಂಡ ಭಾರತ ಮಾಡಿ, ಅದಕ್ಕೆ ಕಾಂಗ್ರೆಸ್ ಕೂಡ ಬೆಂಬಲಿಸಲಿದೆ. ಭಾವನಾತ್ಮಕವಾಗಿ ಸಮುದಾಯವನ್ನು ಬಲಿಕೊಡುವವರು ಕಾಂಗ್ರೆಸಿಗೆ ಮಾರಕ. ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಸಂವಿಧಾದಡಿಯಲ್ಲಿ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.

- Advertisement -

Join Whatsapp