ಸನಾತನ ಹಿಂದೂ ಧರ್ಮ ಕೋಮುವಾದ ಕಲಿಸುವುದಿಲ್ಲ: ಮೆಹಬೂಬಾ ಮುಫ್ತಿ

Prasthutha|

ಆರೆಸ್ಸೆಸ್ ನಿಂದ ರಾಜಕೀಯಕ್ಕಾಗಿ ಹಿಂದೂ ಧರ್ಮ, ಹಿಂದುತ್ವದ ಹೈಜಾಕ್

- Advertisement -

ನವದೆಹಲಿ: ಬಿಜೆಪಿ ಮತ್ತು ಆರೆಸ್ಸೆಸ್ ರಾಜಕೀಯ ಲಾಭಕ್ಕಾಗಿ ಸನಾತನ ಹಿಂದೂ ಧರ್ಮ ಮತ್ತು ಹಿಂದುತ್ವವನ್ನು ದಾರಿ ತಪ್ಪಿಸಿದೆ ಎಂದು ಮಾಜಿ ಮುಖ್ಯಮಂತ್ರಿ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಫ್ತಿ, ಆರೆಸ್ಸೆಸ್ ಮತ್ತು ಬಿಜೆಪಿ ದೇಶದಲ್ಲಿ ಸನಾತನ ಹಿಂದೂ ಧರ್ಮದ ಬದಲು ಮನುವಾದವನ್ನು ಪ್ರತಿಪಾದಿಸುತ್ತಿದೆ. ಸನಾತನ ಹಿಂದೂ ಧರ್ಮ ಸರ್ವ ಧರ್ಮಿಯರನ್ನು ಒಗ್ಗೂಡಿಸಲು ಪ್ರಯತ್ನಿಸಿದರೆ, ಬಿಜೆಪಿ ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸುತ್ತದೆ ಎಂದು ತಿಳಿಸಿದರು.

- Advertisement -

ಸನಾತನ ಹಿಂದೂ ಧರ್ಮ ಕೋಮುವಾದವನ್ನು ಕಲಿಸುವುದಿಲ್ಲ. ಬಿಜೆಪಿ, ಆರೆಸ್ಸೆಸ್ ಮತ್ತು ಸಂಘಪರಿವಾರ ದೇಶದೆಲ್ಲೆಡೆ ಕೋಮುವಾದವನ್ನು ಬಿತ್ತರಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆರೆಸ್ಸೆಸ್ ಪ್ರತಿಪಾದಿಸುವ ಹಿಂದುತ್ವ ಮತ್ತು ಸನಾತನ ಹಿಂದೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.

Join Whatsapp