ಮಡಿಕೇರಿ: ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮತ್ತು ಇತರ ಸೇನಾಧಿಕಾರಿಗಳು ಡಿಸೆಂಬರ್ 8 ರಂದು ವಿಮಾನ ಅಪಘಾತದಲ್ಲಿ ನಿಧನರಾದ ನೋವು ಇಡೀ ದೇಶವನ್ನು ಕಾಡುತ್ತಿದೆ. ಈ ಘಟನೆಯನ್ನು ನೆನೆದು ಇಡೀ ದೇಶವೇ ಇಂದು ಕೂಡ ಕಂಬನಿ ಮಿಡಿಯುತ್ತಿದೆ.
ವೀರ ಸೇನಾನಿಗಳ ನಾಡು ಕೊಡಗಿನಲ್ಲಿ ಯೋಧ ನಮನಂ ಶ್ರದ್ಧಾಂಜಲಿ ರಥಯಾತ್ರೆಯ ಮೂಲಕ ಹುತಾತ್ಮರಿಗೆ ವಿಶೇಷ ಗೌರವ ಅರ್ಪಿಸುತ್ತಿದೆ. ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಯುದ್ಧ ಟ್ಯಾಂಕರ್ ಮಾದರಿ ಸಹಿತ ಬಿಪಿನ್ ರಾವತ್ ಅವರ ಮೂರ್ತಿಯ ರಥವು ಭಾನುವಾರ ಎಮ್ಮೆಮಾಡು, ನಾಪೋಕ್ಲು, ಕುಂಜಿಲ ಕಕ್ಕಬೆ, ನರಿಯಂದಡ ಕೊಣಜಗೇರಿ, ಹೊದ್ದೂರು, ಮೂರ್ನಾಡು, ಹಾಕತ್ತೂರು, ಮೇಕೇರಿ, ಕಡಗದಾಳು, ಚೆಟ್ಟಳ್ಳಿ ಮತ್ತು ಅರೆಕಾಡು ವ್ಯಾಪ್ತಿಯಲ್ಲಿ ಸಂಚರಿಸಿತು. ಹೋದ ಕಡೆಯಲೆಲ್ಲಾ ಅಭೂತಪೂರ್ವ ಸ್ವಾಗತ ದೊರೆಯಿತ್ತಲ್ಲದೆ ದೇಶಭಕ್ತಿಯ ಮತ್ತು ಸೇನಾಭಿಮಾನದ ಘೋಷವಾಕ್ಯಗಳು ಮೊಳಗಿದವು.
ಮೃತಪಟ್ಟರಿಗೆ ಪುಷ್ಪನಮನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು