ಸ್ಥಳೀಯ ಸಂಸ್ಥೆ ಚುನಾವಣೆ| ಕಾಪು, ವಿಟ್ಲ, ಕೋಟೆಕಾರಿನಲ್ಲಿ ಮತದಾನ ಚುರುಕು

Prasthutha|

ಮಂಗಳೂರು: ಕಾಪು, ವಿಟ್ಲ, ಕೋಟೆಕಾರಿನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾನ 7 ಗಂಟೆಗೆ ಆರಂಭವಾಗಿದ್ದು, ಮತದಾನ ಬಿರುಸಿನಿಂದ ಸಾಗುತ್ತಿದೆ.

- Advertisement -

ಬಿಜೆಪಿ, ಕಾಂಗ್ರೆಸ್, ಜೆಡಿಎಸ್,ಎಸ್.ಡಿ.ಪಿ.ಐ, ವೆಲ್ಫೇರ್ ಪಾರ್ಟಿ ಸೇರಿ ಒಟ್ಟು 70 ಮಂದಿ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದ್ದು ಮತದಾರರು ಬೆಳಿಗ್ಗೆಯೇ‌ ಮತದಾನ ಕೇಂದ್ರದ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.

- Advertisement -

ಮತದಾನದ ನೂರು ಮೀಟರ್ ದೂರದಲ್ಲಿ ಪಕ್ಷಗಳು ಬೂತ್ ನಿರ್ಮಿಸಿದ್ದು, ಮತ ಕೇಂದ್ರದ ಬಳಿ ಪೊಲೀಸರು ಭದ್ರತೆ ನೀಡಿದ್ದಾರೆ. ಡಿಸೆಂಬರ್ 30 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

Join Whatsapp