ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಲಕ್ಷ್ಮಣ ಸವದಿ ನೇಮಕ

Prasthutha|

ಬೆಂಗಳೂರು: ಬಿಜೆಪಿಯ ವಿವಿಧ ಜವಾಬ್ದಾರಿಗಳಿಗೆ ಹೊಸ ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್  ಭಾನುವಾರ ಆದೇಶ ಹೊರಡಿಸಿದ್ದಾರೆ.

- Advertisement -

ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವಾಗ  ಉಪಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದ ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿರವರಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಇನ್ನು ಮುಂದೆ ಲಕ್ಷ್ಮಣ ಸವದಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಅಧಿಕಾರ ಹೊಂದಲಿದ್ದಾರೆ. ಈ ಹಿಂದೆ ಸವದಿ ಅವರು ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಸಹ  ಉಪಮುಖ್ಯಮಂತ್ರಿಯಾಗಿದ್ದರು. ಬದಲಾದ ರಾಜಕೀಯ ವಿದ್ಯಮಾನಗಳಿಂದ ಅವರು ಆ   ಹುದ್ದೆ ಕಳೆದುಕೊಂಡಿದ್ದ ಅವರು ಇದೀಗ ರಾಜ್ಯ ಬಿಜೆಪಿಯ ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ.

ಪಕ್ಷದ ಮುಖ್ಯ ವಕ್ತಾರರಾಗಿದ್ದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್  ಅನಿವಾಸಿ ಭಾರತೀಯ ವಿಭಾದ ಸಂಚಾಲಕರನ್ನಾಗಿ ನೇಮಕವಾಗಿದ್ದಾರೆ.ರಾಜ್ಯ ಬಿಜೆಪಿ ಮುಖ್ಯ ವಕ್ತಾರರ ಸ್ಥಾನಕ್ಕೆ ಮೈಸೂರಿನ ಎಂ.ಜಿ ಮಹೇಶ್ ಅವರನ್ನು ನೇಮಿಸಲಾಗಿದೆ.

- Advertisement -

ಇನ್ನು ಹಲವು ನೇಮಕಗಳೂ ನಡೆದಿವೆ.

Join Whatsapp