ವೊಲೊಡಿಮಿರ್ ಝೆಲೆನ್ ಸ್ಕಿಗೆ ‘ಟೈಮ್’ ‘ವರ್ಷದ ವ್ಯಕ್ತಿ’  ಗೌರವ

Prasthutha|

ವಾಷಿಂಗ್ಟನ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿ ಅವರನ್ನು ಟೈಮ್ 2022ರ ಸಾಲಿನ ‘ವರ್ಷದ ವ್ಯಕ್ತಿ’ಎಂದು ಘೋಷಿಸಲಾಗಿದೆ.

ಈ ವಾರದ ಆರಂಭದಲ್ಲಿ ಟೈಮ್ ನಿಯತಕಾಲಿಕದ ಶೀರ್ಷಿಕೆಗಾಗಿ ಶಾರ್ಟ್ ಲಿಸ್ಟ್ ಮಾಡಲಾದ ಹತ್ತು ಜನರಲ್ಲಿ ಝೆಲೆನ್ ಸ್ಕಿ ಅವರನ್ನು ಆಯ್ಕೆ ಮಾಡಲಾಯಿತು.

- Advertisement -

44 ವರ್ಷದ ಝೆಲೆನ್ಸ್ಕಿ  ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಪ್ರಾರಂಭವಾದಾಗಿನಿಂದ  ಉಕ್ರೇನ್ ಅನ್ನು ಮುನ್ನಡೆಸಿದ್ದರಿಂದ ಉಕ್ರೇನ್ ಮತ್ತು ವಿದೇಶಗಳಲ್ಲಿ ಅನೇಕರು ಅವರನ್ನು‘ಹೀರೊ’ ಆಗಿ ಗುರುತಿಸಿದ್ದಾರೆ. ಪ್ರಜಾಪ್ರಭುತ್ವ ಮತ್ತು ದೇಶ ರಕ್ಷಣೆಯ ಪ್ರತೀಕವಾಗಿ ಅವರು ನಿಂತಿದ್ದಾರೆ. ಆದ್ದರಿಂದ ಅವರು ವರ್ಷದ ವ್ಯಕ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಟೈಮ್ ವಾಹಿನಿ ಟ್ವೀಟ್ ಮಾಡಿದೆ.

ಕಳೆದ ವರ್ಷ ಈ ಗೌರವ ಜಗತ್ತಿನ ಆಗರ್ಭ ಸಿರಿವಂತ, ಟ್ವಿಟರ್ ಮಾಲಕ ಎಲಾನ್ ಮಸ್ಕ್ ಅವರಿಗೆ ಸಂದಿತ್ತು.

- Advertisement -