ಹಿಮಾಚಲ ಪ್ರದೇಶ ಚುನಾವಣೆ: ಅಧಿಕಾರದತ್ತ ಕಾಂಗ್ರೆಸ್ ದಾಪುಗಾಲು

Prasthutha|

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು,, ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ, ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ ಸನಿಹಕ್ಕೆ ಬಂದಿದೆ.

- Advertisement -


ಈ ಮೂಲಕ ಕಾಂಗ್ರೆಸ್ ಅಧಿಕಾರದತ್ತ ದಾಪುಗಾಲು ಇಟ್ಟಿದೆ.


ಹಿಮಾಚಲ ಪ್ರದೇಶ ವಿಧಾನಸಭೆಯ ಒಟ್ಟು ಸ್ಥಾನಗಳು 68. ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 35. ಸದ್ಯದ ಮಾಹಿತಿ ಪ್ರಕಾರ ಕಾಂಗ್ರೆಸ್ 38, ಬಿಜೆಪಿ 27 ಹಾಗೂ ಇತರೆ 3 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

- Advertisement -

ಹಿಮಾಚಲ ಪ್ರದೇಶದ ಮತದಾರರು 68 ಸ್ಥಾನಗಳ ವಿಧಾನ ಸಭೆಗೆ ಮತ ಚಲಾಯಿಸಿ ಒಂದೂವರೆ ತಿಂಗಳುಗಳೇ ಕಳೆದವು. ಕಾಂಗ್ರೆಸ್ ಸರಳ ಬಹುಮತದತ್ತ ಸಾಗಿದೆ.

  ಗುರುವಾರ ನಡೆದಿರುವ ಮತ ಣಿಕೆಯಲ್ಲಿ ಆರಂಭದಿಂದಲೂ ಕಾಂಗ್ರೆಸ್ ಪಕ್ಷವು ಬಿಜೆಪಿಗಿಂತ ಒಂದು ಹೆಜ್ಜೆ ಮುಂದಿದೆ. ಇಲ್ಲಿನ ಮತದಾರರು ಕಳೆದ ಎರಡು ದಶಕಗಳಿಂದ ಒಂದು ಅವಧಿಗೆ ಬಿಜೆಪಿ ಹಾಗೂ ಮತ್ತೊಂದು ಅವಧಿಗೆ ಕಾಂಗ್ರೆಸ್ ಹೀಗೆ ಗೆಲ್ಲಿಸುತ್ತ ಬಂದಿದ್ದಾರೆ.

ಬಹುಮತಕ್ಕೆ 35 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು. ಈಗಾಗಲೇ ಬಂದಿರುವ ಸುದ್ದಿಗಳ ಪ್ರಕಾರ ಕಾಂಗ್ರೆಸ್ 35ರಲ್ಲಿ ನಿರ್ಣಾಯಕ ಮುನ್ನಡೆ ಸಾಧಿಸಿದೆ ಎಂದು ವರದಿಯಾಗಿದೆ.  

ಆಡಳಿತ ವಿರೋಧಿ ಗಾಳಿ ಈ ರಾಜ್ಯದಲ್ಲಿ ಸದಾ ಜೀವಂತ. ಬಿಜೆಪಿ 29 ಸ್ಥಾನಗಳಲ್ಲಿ ಖಚಿತ ಗೆಲುವಿನ ಮುನ್ನಡೆ ಸಾಧಿಸಿರುವುದಾಗಿ ವರದಿಯಾಗುತ್ತಿದೆ. ಭಾರೀ ಹುಮ್ಮಸ್ಸಿನಲ್ಲಿದ್ದ ಎಎಪಿ ಇಲ್ಲಿ ಸೊನ್ನೆ ಸಾಧನೆಯ ಹಾದಿಯಲ್ಲಿದೆ. 

Join Whatsapp