ಚೆನ್ನೈ : ಇತ್ತೀಚೆಗೆ ಮುಕ್ತಾಯವಾದ ತಮಿಳುನಾಡು ಸ್ಥಳೀಯ ಚುನಾವಣೆಯಲ್ಲಿ ಡಿಎಂಕೆ ತಮಿಳುನಾಡು ಕಾಣದ ದಾಖಲೆಯ ಗೆಲುವು ಸಾಧಿಸಿದೆ. ಆಡಳಿತರೂಢ ಪಕ್ಷ ಸ್ಥಳೀಯ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ತಮಿಳುನಾಡಿನಲ್ಲಿ ವಾಡಿಕೆ. ಆದರೆ, ಸಿಎಂ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸಾಧಿಸಿದ್ದು ತಮಿಳುನಾಡು ಚುನಾವಣಾ ಇತಿಹಾಸ ಕಾಣದ ಮಟ್ಟಿಗೆ ದಾಖಲೆಯ ಗೆಲುವು ಆಗಿದೆ. ಸ್ಥಳೀಯ ಚುನಾವಣೆ ನಡೆದ ಸ್ಥಾನಗಳ ಪೈಕಿ ಶೇ.77ಕ್ಕೂ ಅಧಿಕ ಸ್ಥಾನಗಳಲ್ಲಿ ಡಿಎಂಕೆ ಗೆಲುವು ದಾಖಲಿಸಿದೆ ಎನ್ನಲಾಗುತ್ತಿದೆ. ಪ್ರಮುಖ ವಿರೋಧ ಪಕ್ಷದವಾದ ಎಡಿಎಂಕೆ ನೆಲ ಕಚ್ಚಿದೆ. ಬಿಜೆಪಿ ಈ ಚುನಾವಣೆಯಲ್ಲಿ ಕಾಣದತಾಂಗಿದೆ.
ಈ ನಡುವೆ ತಮಿಳು ನಟ ವಿಜಯ್ ಅವರ ಅಭಿಮಾನಿಗಳ ಸಂಘದಿಂದ ಸುಮಾರು 150ಕ್ಕೂ ಹೆಚ್ಚುಅಭ್ಯರ್ಥಿಗಳು ವಿಜಯ್ ಹೆಸರಿನಲ್ಲಿ ಸ್ಪರ್ಧಿಸಿದ್ದರು. ಈ ಪೈಕಿ 100 ಜನರು ಗೆಲುವು ಸಾಧಿಸುವ ಮೂಲಕ ಎಲ್ಲಾ ರಾಜಕೀಯ ಪಕ್ಷಗಳ ಹುಬ್ಬೇರಿಸಿದ್ದಾರೆ.