ಲಾಕ್’ಡೌನ್ ಭೀತಿ: ಐಫೋನ್ ಫ್ಯಾಕ್ಟರಿಯ ಕಂಪೌಂಡ್ ಹಾರಿ ಪರಾರಿಯಾದ ಕಾರ್ಮಿಕರು

Prasthutha|

ಬೀಜಿಂಗ್: ಕೋವಿಡ್ ಪೀಡಿತ ಝೆಂಗ್’ಝೌನಲ್ಲಿ ಲಾಕ್’ಡೌನ್’ನಿಂದ ತಪ್ಪಿಸಿಕೊಳ್ಳಲು ವಲಸೆ ಕಾರ್ಮಿಕರು ಚೀನಾದ ಐಫೋನ್ ಫ್ಯಾಕ್ಟರಿಯ ಬೃಹತ್ ಕಂಪೌಂಡ್ ಅನ್ನು ಹಾರಿ ಪರಾರಿಯಾದ ಘಟನೆ ಚೀನಾದ ಬೀಜಿಂಗ್’ನಲ್ಲಿ ನಡೆದಿದೆ. ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -

ಝೆಂಗ್‌ಝೌದಲ್ಲಿನ ಆ್ಯಪಲ್’ನ ಫ್ಯಾಕ್ಟರಿಯಿಂದ ಕಾರ್ಮಿಕರು ಪರಾರಿಯಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಲಾಕ್’ಡೌನ್ ಹೇರಲಾಗಿತ್ತು. ಇದಕ್ಕಾಗಿ ಫ್ಯಾಕ್ಟರಿಯ ಸುತ್ತಾ ಕಬ್ಬಿಣದ ಬೇಲಿಯನ್ನು ತಡೆಗೋಡೆಯಾಗಿ ನಿರ್ಮಿಸಲಾಗಿದ್ದು, ಕಾರ್ಮಿಕರು ಇದನ್ನು ಹಾರಿ ತಪ್ಪಿಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಏಕಾಏಕಿ ಹಲವಾರು ಕಾರ್ಮಿಕರನ್ನು ಕ್ವಾರಂಟೈನ್’ನಲ್ಲಿ ಇರಿಸಲಾಗಿದೆ ಎಂದು ಈ ಹಿಂದೆ ವರದಿಯಾಗಿತ್ತು.

Join Whatsapp