ಹಿರಿಯ ಸಾಹಿತಿ ದೇವನೂರ ಮಹಾದೇವ ಅವರ ‘ಆರೆಸ್ಸೆಸ್: ಆಳ ಮತ್ತು ಅಗಲ’ ಕೃತಿಗೆ ಭಾರೀ ಬೇಡಿಕೆ

Prasthutha|

►ಆರೆಸ್ಸೆಸ್ ನ ಹಿಡನ್ ಅಜೆಂಡಾ ತೆರೆದಿಟ್ಟ ಪುಸ್ತಕ ದಾಖಲೆಯ ಮಾರಾಟ

- Advertisement -

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಅನ್ನು ವಿಶ್ಲೇಷಿಸುವ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರ ಹೊಸ ಕನ್ನಡ ಪುಸ್ತಕ ‘ಆರ್ ಎಸ್ಎಸ್: ಆಳ ಮತ್ತು ಅಗಲ’ ಕೃತಿಯು ಈಗಾಗಲೇ 9 ಸಾವಿರಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿದ್ದು, ಇದಕ್ಕಿಂತ ಇಮ್ಮಡಿ ಬೇಡಿಕೆ ಬಂದಿದೆ. ಕೃತಿ ಬಿಡುಗಡೆಗೊಂಡ ಮೂರೇ ದಿನಗಳಲ್ಲಿ ಈ ಪ್ರಮಾಣದಲ್ಲಿ ಮಾರಾಟವಾಗಿದ್ದು ದಾಖಲೆಯಾಗಿದ್ದು, ಇನ್ನಷ್ಟು ಪ್ರತಿಗಳನ್ನು ಮುದ್ರಿಸುವ ಪ್ರಕ್ರಿಯೆ ಭರದಿಂದ ಸಾಗಿದೆ.

ಕರ್ನಾಟಕದ ಅಗ್ರಗಣ್ಯ ಬರಹಗಾರರಲ್ಲಿ ಓರ್ವರಾಗಿರುವ ದೇವನೂರರ ಈ ಕೃತಿಯಲ್ಲಿ , ಆರೆಸ್ಸೆಸ್ ಚಿಂತಕರಾದ ಗೋಲ್ವಾಲ್ಕರ್, ಸಾವರ್ಕರ್ ಮತ್ತು ಹೆಡಗೇವಾರ್ ಅವರೆಲ್ಲ ಸಂವಿಧಾನದ ಮೌಲ್ಯಗಳನ್ನು ಮೀರಿ ಹೇಗೆ ಸಿದ್ಧಾಂತ ಕಟ್ಟಿದ್ದಾರೆ ಮತ್ತು ಇತಿಹಾಸದ ಸಂಗತಿಗಳನ್ನು ಹೇಗೆಲ್ಲ ತಿರುಚಿದ್ದಾರೆ ಎನ್ನುವುದನ್ನು ಅವರು ತಮ್ಮ ಅಧ್ಯಯನದ ಮಾಹಿತಿಯೊಂದಿಗೆ ಕಟ್ಟಿಕೊಟ್ಟಿದ್ದಾರೆ. 72 ಪುಟಗಳ ಕೃತಿ ಪ್ರಕಟಣೆಯ ಹಕ್ಕುಸ್ವಾಮ್ಯವನ್ನು ಮುಕ್ತವಾಗಿಡಲಾಗಿದೆ.

- Advertisement -

ಮೊದಲಿಗೆ ಅಭಿರುಚಿ ಪ್ರಕಾಶನ, ಗೌರಿ ಮಿಡಿಯಾ ಟ್ರಸ್ಟ್, ಚಿಕ್ಕನಾಯಕನಹಳ್ಳಿಯ ನಡೆ–ನುಡಿ, ತಿಪಟೂರಿನ ಜನಸ್ಪಂದನ ಟ್ರಸ್ಟ್, ಮಾನವ ಬಂಧುತ್ವ ವೇದಿಕೆ ಹಾಗೂ ಭಾರತೀಯ ಪರಿವರ್ತನ ಸಂಘ– ಇವುಗಳಿಗೆ ಒಟ್ಟು 9000 ಪ್ರತಿಗಳನ್ನು ಮುದ್ರಿಸುವ ಅವಕಾಶ ನೀಡಲಾಗಿತ್ತು. ಗೌರಿ ಮೀಡಿಯಾ ಟ್ರಸ್ಟ್ ಎರಡೇ ದಿನಗಳಲ್ಲಿ 2000 ಪ್ರತಿಗಳನ್ನು ಮಾರಾಟ ಮಾಡಿದ್ದು. ಇನ್ನೂ 3000 ಪ್ರತಿಗಳನ್ನು ಮುದ್ರಿಸಲು ಮುಂದಾಗಿದೆ.

ಮಂಗಳೂರಿನ ಸ್ತುತಿ ಪಬ್ಲಿಕೇಷನ್ ಮಳಿಗೆಯಲ್ಲೂ ಈ ಕೃತಿ ಲಭ್ಯವಿದ್ದು, ಭರ್ಜರಿ ಮಾರಾಟವಾಗುತ್ತಿದೆ ಎಂದು ಪ್ರಕಾಶಕರು ತಿಳಿಸಿದ್ದಾರೆ.

Join Whatsapp