ಪತ್ರಕರ್ತ ಝುಬೈರ್ ಗೆ ಜೀವ ಬೆದರಿಕೆ

Prasthutha|

ನವದೆಹಲಿ: ಪತ್ರಕರ್ತ ಮುಹಮ್ಮದ್ ಝುಬೈರ್ ಪರ ಹಾಜರಾಗುತ್ತಿರುವ ಹಿರಿಯ ವಕೀಲ ಕಾಲಿನ್ ಗೋನ್ಸಾಲ್ವೆಸ್ ಅವರು ಝುಬೈರ್ ರಿಗೆ ಜೀವ ಬೆದರಿಕೆ ಬರುತ್ತಿರುವುದಾಗಿ ಹೇಳಿದರು.

- Advertisement -

ಆಲ್ಟ್ ನ್ಯೂಸ್ ನ ಮುಹಮ್ಮದ್ ಝುಬೈರ್ ಅವರ ಜಾಮೀನು ಅರ್ಜಿಯನ್ನು ಆದ್ಯತೆಯ ಮೇಲೆ ಸುಪ್ರೀಂ ಕೋರ್ಟು ಶುಕ್ರವಾರವೇ ಕೈಗೆತ್ತಿಕೊಳ್ಳಲು ಪಟ್ಟಿ ಮಾಡಿದೆ. ಸಿಜೆಐ ಅವರೇ ವಿಚಾರಣೆ ನಡೆಸಲಿದ್ದಾರೆ.

ಬಾರ್ ಮತ್ತು ಬೆಂಚ್ ನಲ್ಲಿ ವರದಿಯಾಗಿರುವಂತೆ ಆಲ್ಟ್ ನ್ಯೂಸ್ ಸಹ ಸಂಪಾದಕ ಝುಬೈರ್ ಜೀವ ಬೆದರಿಕೆ ಎದುರಿಸುವುದಾಗಿ ಅವರ ವಕೀಲರಾದ ಕಾಲಿನ್ ಗೋನ್ಸಾಲ್ವೆಸ್ ಹೇಳಿದ್ದಾರೆ. ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅವರ ನಿರೀಕ್ಷಣಾ ಜಾಮೀನು ತಿರಸ್ಕೃತವಾಗಿದೆ. “ ಎಲ್ಲೆಡೆ ದ್ವೇಷದ ಭಾಷಣ ಮಾಡುತ್ತಿರುವವರು ಆತನನ್ನು ಕೊಲ್ಲುವುದಾಗಿ ಬದರಿಕೆ ಹಾಕುತ್ತಿದ್ದಾರೆ” ಎಂದು ಗೋನ್ಸಾಲ್ವೆಸ್ ಹೇಳಿದರು.

- Advertisement -

ಸೀತಾಪುರದಲ್ಲಿ ಝುಬೈರ್ ವಿರುದ್ಧ ದಾಖಲಾಗಿರುವ ಎಫ್ ಐಅರ್ ರದ್ದು ಪಡಿಸುವುದು ಹಾಗೂ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿ ಸಲ್ಲಿಸಲಾಗಿದ್ದು, ಸರ್ವೋಚ್ಚ ನ್ಯಾಯಾಲಯವು ನಾಳೆಯೇ ಅದನ್ನು ಕೈಗೆತ್ತಿಕೊಳ್ಳಲು ಒಪ್ಪಿದೆ.

2018ರ ಟ್ವೀಟ್ ಒಂದು ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡಿದೆ ಎಂಬ ದೂರಿನ ಮೇಲೆ ಜೂನ್ 25ರಂದು ಝುಬೈರ್ ರನ್ನು ಬಂಧಿಸಲಾಗಿದೆ.

Join Whatsapp