ಮುಂಬೈ | ಹಿರಿಯ ನಟ ಅರುಣ್ ಬಾಲಿ ನಿಧನ

Prasthutha|

ಮುಂಬೈ: ಬಾಲಿವುಡ್’ನ ಹಲವು ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಎಲ್ಲರನ್ನೂ ಆಕರ್ಷಿಸಿದ್ದ ಹಿರಿಯ ನಟ ಅರುಣ್ ಬಾಲಿ ಅವರು ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ಪ್ರಾಯವಾಗಿತ್ತು.

- Advertisement -

ಅಲ್ಪಕಾಲದಿಂದ ನರಸ್ನಾಯು ಕಾಯಿಲೆಯಾದ ಮೈಸ್ತೇನಿಯಾ ಗ್ರ್ಯಾವಿಸ್’ನಿಂದ ಬಳಲುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಹಿರ್ನಂದಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅರುಣ್ ಬಾಲಿ ಅವರು ಅಮೆರಿಕದಲ್ಲಿ ನೆಲೆಸಿರುವ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Join Whatsapp