ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯಲ್ಲಿ ವಿ.ಡಿ.ಸಾವರ್ಕರ್ ಚಿತ್ರ: ಮುಜುಗರಕ್ಕೀಡಾದ ಕಾಂಗ್ರೆಸ್ ವಿವಾದದ ಬಳಿಕ ಸಾವರ್ಕರ್ ಚಿತ್ರಕ್ಕೆ ಕೊಕ್

Prasthutha|

ಕೊಚ್ಚಿ: ಆರ್ ಎಸ್ ಎಸ್ ಸಿದ್ಧಾಂತಿ ಮತ್ತು ಬ್ರಿಟಿಷರೊಂದಿಗೆ ಕ್ಷಮೆ ಕೇಳಿ ಸ್ವಾತಂತ್ರ್ಯ ಹೋರಾಟದಿಂದ ಹಿಂದೆ ಸರಿದ  ವಿ.ಡಿ.ಸಾವರ್ಕರ್ ಅವರ ಚಿತ್ರವೊಂದು ಕಾಂಗ್ರೆಸ್ ನ ಭಾರತ್  ಜೋಡೋ ಯಾತ್ರೆಯಲ್ಲಿ ಕಂಡುಬಂದಿದ್ದು, ಕಾಂಗ್ರೆಸ್ ತೀವ್ರ ಮುಜುಗರ ಅನುಭವಿಸಿದೆ. ವಿವಾದದ ಬಳಿಕ ಚಿತ್ರವನ್ನು ಮರೆಮಾಚಲಾಗಿದೆ.

- Advertisement -

ಅಲುವಾ ಕ್ಷೇತ್ರದ ನೆಡುಂಬಸ್ಸೆರಿ ವಿಮಾನ ನಿಲ್ದಾಣ ಜಂಕ್ಷನ್ ಬಳಿಯ ಕೊಟ್ಟೈನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಚೆಂಗಮಾನದ್ ಮಂಡಲಂ ಸಮಿತಿ ಹಾಕಿರುವ ಬ್ಯಾನರ್ ನಲ್ಲಿ ಸಾವರ್ಕರ್ ಫೋಟೋವನ್ನು ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಹಾಕಲಾಗಿತ್ತು. ಇದರ ವಿರುದ್ಧ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ, ಎಚ್ಚೆತ್ತುಕೊಂಡ ಸಂಘಟಕರು, ಮಹಾತ್ಮ ಗಾಂಧಿಯವರ ಚಿತ್ರವನ್ನು ಸಾವರ್ಕರ್ ಫೋಟೋ ಮೇಲೆ ತೂಗುಹಾಕುವ ಮೂಲಕ ಸಾವರ್ಕರ್ ಅವರ ಭಾವಚಿತ್ರ ಕಾಣದಂತೆ ಮಾಡಿದರು.

ಯಾತ್ರೆ ಆ ಸ್ಥಳಕ್ಕೆ ಬರುವ  ಮೊದಲು ಸಾವರ್ಕರ್ ಅವರ ಭಾವಚಿತ್ರವನ್ನು ಗಾಂಧಿಯ ಚಿತ್ರದಿಂದ ಮುಚ್ಚಲಾಗಿತ್ತು.

- Advertisement -

ಕಾಂಗ್ರೆಸ್ ಶಾಸಕ ಅನ್ವರ್ ಸಾದಾತ್ ಅವರ ಕ್ಷೇತ್ರವಾದ ಅಲುವಾದಲ್ಲಿ ಅವರ ಮನೆಯ ಹೊರಗೆ ಈ ಬ್ಯಾನರ್ ಹಾಕಲಾಗಿದೆ. ಅನ್ವರ್ ಸಾದಾತ್ ಅವರ ಸ್ವಂತ ಬೂತ್ ನಲ್ಲಿ ಈ ಘಟನೆ ನಡೆದಿದ್ದು, ಅವರನ್ನು ಪಕ್ಷದ ಮುಖಂಡರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಚೆಂಗಮನಾಡು ಪಂಚಾಯತ್ ಮಾಜಿ ಅಧ್ಯಕ್ಷ ದಿಲೀಪ್ ಕಪ್ರಾಸೆರಿ ಅವರ ನೇತೃತ್ವದಲ್ಲಿ ಈ ಬ್ಯಾನರ್ ಅನ್ನು ಹಾಕಲಾಗಿದೆ ಎಂದು ತಿಳಿದುಬಂದಿದೆ.

ಈ ಘಟನೆ ವಿವಾದಕ್ಕೆ ಕಾರಣವಾದ ನಂತರ, ಸ್ಥಳೀಯ ಐಎನ್ ಟಿಯುಸಿ ನಾಯಕ ಸುರೇಶ್ ಅಥಣಿ ಅವರು  ಗಾಂಧೀಜಿಯವರ  ವಿಭಿನ್ನ ಗಾತ್ರದ ಭಾವಚಿತ್ರವನ್ನು ತಂದು ಸಾವರ್ಕರ್ ಅವರ ಭಾವಚಿತ್ರಕ್ಕೆ ನೇತುಹಾಕಿದ್ದಾರೆ. ಗಾಂಧಿ ಹತ್ಯೆಯ ಆರೋಪಿ ಸಾವರ್ಕರ್ ಅವರ ಭಾವಚಿತ್ರದ ಗಾಂಧಿ ಚಿತ್ರದ ಹಿಂದೆ ಇನ್ನೂ ಇದೆ. ಅದನ್ನು ಬ್ಯಾನರ್ ನಿಂದ ತೆಗೆದುಹಾಕಲಾಗಿಲ್ಲ ಎಂದು ತಿಳಿದುಬಂದಿದೆ.

Join Whatsapp