ಮೈಸೂರು: ವಿದ್ಯಾರ್ಥಿಗಳ ಹೃದಯ ಕಲಕಿ ರಾಜಕಿಯ ಮಾಡುವುದು ಸರಿಯಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನುಡಿದಿದ್ದಾರೆ.
ಹಿಜಾಬ್ ವಿಚಾರಕ್ಕೆ ಸಮಬಂಧಿಸಿದಂತೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮಕ್ಕಳಿಗೆ ಯಾವುದೇ ರಾಜಕೀಯ ಇಲ್ಲ, ಧರ್ಮ ಇಲ್ಲ. ಪ್ರಸ್ತುತ ಆಗುತ್ತಿರುವುದು ತೀಟೆ ಜಗಳ ಎಂದು ಕಿಡಿಕಾರಿದರು. ಮಕ್ಕಳ ಹೃದಯ ಕಲಕಿ ರಾಜಕಾರಣ ಮಾಡಬಾರದು. ಹೊಸದಾಗಿ ಹಿಜಾಬ್ ಧರಿಸಿ ಮಕ್ಕಳು ಶಾಲೆಗೆ ಬರುತ್ತಿಲ್ಲ. ಆದರೆ ಕೇಸರಿ ಶಾಲು ಯಾವಾಗಿನಿಂದ ಬಂತು? ಎಂದು ವಾಟಾಳ್ ನಾಗರಾಜ್ ಪ್ರಶ್ನಿಸಿದ್ದಾರೆ. ಈ ಮೂಲಕ ಹಿಜಾಬ್ಗೆ ಧರಿಸುವುದಕ್ಕೆ ಅವರು ಬೆಂಬಲ ಸೂಚಿಸಿದ್ದಾರೆ.