ಸಂಸದ ಪ್ರತಾಪ್ ಸಿಂಹ ಸಂವಿಧಾನ ವಿರೋಧಿ ಹೇಳಿಕೆ: ಎಸ್‌ಡಿಪಿಐ ಪ್ರತಿಭಟನೆ

Prasthutha|

►ಕೋಮು ಸೌಹಾರ್ದ ಕೆಡಿಸಲು ಯತ್ನಿಸುತ್ತಿರುವ ಸಂಸದನನ್ನು ಉಚ್ಚಾಟಿಸಲು ಆಗ್ರಹ

- Advertisement -

ಮಡಿಕೇರಿ: ಸಂಸದ ಪ್ರತಾಪ್ ಸಿಂಹ ಸಂವಿಧಾನ ವಿರೋಧಿ ಹೇಳಿಕೆಯನ್ನು ಖಂಡಿಸಿ ಮಡಿಕೇರಿಯಲ್ಲಿ ಶನಿವಾರ ಎಸ್‌ಡಿಪಿಐ ಪ್ರತಿಭಟನೆ ನಡೆಸಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೊಡಗು ಜಿಲ್ಲಾದ್ಯಕ್ಷರಾದ ಮುಸ್ತಫಾ ಮಡಿಕೇರಿ,  ಮುಸ್ಲಿಮ್ ಮಹಿಳೆಯರ ಸಾಂವಿಧಾನಿಕ ಮತ್ತು ಧಾರ್ಮಿಕ ಹಕ್ಕಾಗಿರುವ ಹಿಜಾಬ್ ನ್ನು ಧರಿಸಿ ಶಾಲೆಗಲ್ಲ,ಮದ್ರಸಕ್ಕೆ ಹೋಗಿ ಎಂಬ ಸಂಸದ ಪ್ರತಾಪ ಸಿಂಹ ಸಂವಿಧಾನ ವಿರೋಧಿ ಹೇಳಿಕೆಯನ್ನು ಖಂಡಿಸಿದ್ದಾರೆ.

- Advertisement -

ಅಲ್ಲದೆ ನಿರಂತರವಾಗಿ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಕೋಮು ಸೌಹಾರ್ದತೆ ಕೆಡಿಸುತ್ತಿರುವ ಸಂಸದ ಪ್ರತಾಪ್ ಸಿಂಹನ ಸಂಸತ್ ಸದಸ್ಯತನದಿಂದ ಉಚ್ಚಾಟಿಸಬೇಕೆಂದು ಆಗ್ರಹಿಸಿದ್ದಾರೆ.

ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತಾ ವಿಶ್ವಕ್ಕೆ ಸಮಾನತೆಯನ್ನು ಎತ್ತಿ ತೋರಿಸುತ್ತಾ ಬಂದಿದೆ. ದೇಶವೂ ಸಾಂವಿಧಾನಿಕ,ಪ್ರಜಾಸತಾತ್ಮಕ ದೇಶವಾಗಿದ್ದು. ಪ್ರತಿಯೊಬ್ಬ ಧರ್ಮಿಯನಿಗೂ ಅವನ ಆಚಾರ ವಿಚಾರದಂತೆ ನಡೆದುಕೊಳ್ಳಲು ಸಾಂವಿಧಾನ ಅವಕಾಶ ನೀಡಿದೆ.ಹೀಗಿರುವಾಗ  ಜನಪ್ರತಿನಿಧಿಯಾದವರು ಸಂವಿಧಾನ ವಿರೋಧಿ ಹೇಳಿಕೆ ನೀಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವುದು ಖಂಡನಾರ್ಹವಾಗಿದೆ ಮತ್ತು ಸಂಸದ ಸ್ಥಾನಕ್ಕೆ ಬಗೆದ ಅಪಚಾರವಾಗಿದೆ‌.

ಮೈಸೂರು-ಕೊಡಗು ಕ್ಷೇತ್ರದ  ಸಂಸದನಾಗಿ  ಅಭಿವೃದ್ಧಿ ಕೆಲಸದಲ್ಲಿ ಶೂನ್ಯವಾಗಿ ನಿಂತಿರುವ ಪ್ರತಾಪ ಸಿಂಹ ಚುನಾವಣೆಯ ಹೊಸ್ತಿಲಲ್ಲಿ ಸಂಧರ್ಭದಲ್ಲಿ  ತನ್ನ ವೋಟ್ ಬ್ಯಾಂಕಿ ಗಟ್ಟಿಗೊಳಿಸುವ ಸಲುವಾಗಿ ಹಿಂದೂ,ಮುಸ್ಲಿಮ್ ಕೋಮು ಧ್ರುವೀಕರಣ ಮಾಡುವುದರ ಮೂಲಕ ಒಂದು ವರ್ಗವನ್ನು ಎತ್ತಿಕಟ್ಟಿ ಈ ನೆಲದ ಸೌಹರ್ದತೆಯನ್ನು ಕದಡುವ ಕೆಲಸ ಮಾಡುತ್ತಿರುವ ಸಂಸದ ಪ್ರತಾಪ್ ಸಿಂಹನ ಸಂಸತ್ ಸ್ಥಾನದಿಂದ ಉಚ್ಚಾಟಿಸಬೇಕೆಂದು ಎಸ್‌ಡಿಪಿಐ ಕೊಡಗು ಜಿಲ್ಲಾಧ್ಯಕ್ಷರಾದ ಮುಸ್ತಫಾ ಮಡಿಕೇರಿ ಆಗ್ರಹಿಸಿದ್ದಾರೆ



Join Whatsapp