ಮಂಜೇಶ್ವರ ಠಾಣೆಯಲ್ಲಿ ಹುಟ್ಟುಹಬ್ಬಆಚರಿಸಿದ ವರ್ಕಾಡಿಯ ಬಾಲಕ ಆಶಿಲ್

Prasthutha|

ಮಂಜೇಶ್ವರ: ಬಾಲಕ ತನ್ನ ಹುಟ್ಟುಹಬ್ಬವನ್ನು ಪೊಲೀಸ್ ಠಾಣೆಯಲ್ಲಿ ಆಚರಿಸಬೇಕೆಂಬ ಮಹದಾಸೆಯನ್ನು ಮಂಜೇಶ್ವರ ಪೊಲೀಸ್ ಠಾಣೆಯ ಪೊಲೀಸರು ಈಡೇರಿಸಿದ್ದಾರೆ.

- Advertisement -


ವರ್ಕಾಡಿಯ ಅಝೀಝ್ ಕಲ್ಲೂರು – ಆರಿಫಾ ದಂಪತಿಯ ಪುತ್ರ , ವರ್ಕಾಡಿ ಧರ್ಮನಗರ ಮಣವಾಠಿ ಬೀವಿ ಆಂಗ್ಲಮಾಧ್ಯಮ ಶಾಲೆಯ ಯುಕೆಜಿ ವಿದ್ಯಾರ್ಥಿ ಆಶೀಲ್ ಆಗಸ್ಟ್ 6 ರಂದು ಶನಿವಾರ ತನ್ನ 6ನೇ ವರ್ಷದ ಹುಟ್ಟುಹಬ್ಬವನ್ನು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಕೇಕ್ ತುಂಡರಿಸಿ, ಸಿಹಿತಿಂಡಿ ಹಂಚಿ ಆಚರಿಸಿದ್ದಾನೆ.


ತನ್ನ ಹುಟ್ಟುಹಬ್ಬವನ್ನು ಪೊಲೀಸ್ ಠಾಣೆಯಲ್ಲಿ ಆಚರಿಸಬೇಕೆಂದು ಆಶೀಲ್, ತಂದೆ ತಾಯಿ ಬಳಿ ಪಟ್ಟು ಹಿಡಿದಿದ್ದ, ಈ ಹಿನ್ನೆಲೆಯಲ್ಲಿ ತಂದೆ ಅಝೀಝ್ ಕಲ್ಲೂರು ಅವರು ಮಂಜೇಶ್ವರ ಠಾಣೆಯ ಪೊಲೀಸರನ್ನು ಸಂಪರ್ಕಿಸಿದ್ದರು.

- Advertisement -


ಆಶೀಲ್ ನ ಮಹದಾಸೆಯಂತೆ ಮಂಜೇಶ್ವರ ಠಾಣೆಯಲ್ಲಿಯೇ ಹುಟ್ಟುಹಬ್ಬವನ್ನು ಆಚರಿಸಲು ಮಂಜೇಶ್ವರ ಪೊಲೀಸರು ಅವಕಾಶ ಮಾಡಿಕೊಟ್ಟರು. ಮಂಜೇಶ್ವರ ಸರ್ಕಲ್ ಇನ್ಸ್ ಪೆಕ್ಟರ್ ಸಂತೋಷ್ ಕುಮಾರ್, ಎಸ್ ಐ ಟೋನಿ, ಅನ್ಸಾರ್ ಸಹಿತ ಠಾಣೆಯ ಪೊಲೀಸರು ಆಶೀಲ್ ನ ಹುಟ್ಟುಹಬ್ಬದಲ್ಲಿ ಪಾಲ್ಗೊಂಡು ಶುಭಹಾರೈಸಿದರು.

Join Whatsapp