ದೋಣಿಯಲ್ಲಿ ಎಲ್ ಪಿಜಿ ಸಿಲಿಂಡರ್ ಸ್ಫೋಟ; ನಾಲ್ವರು ಸಾವು

Prasthutha|

ಪಾಟ್ನಾ: ಮೋಟಾರು ದೋಣಿಯಲ್ಲಿ ಎಲ್ ಪಿಜಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ನಾಲ್ವರು ಮೃತಪಟ್ಟು, 20 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಪಾಟ್ನಾದ ಮನೇರ್ ಪ್ರದೇಶದಲ್ಲಿ ನಡೆದಿದೆ.

- Advertisement -

ದೋಣಿಯಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಕ್ರಮ ಮರಳು ಸಾಗಿಸಲಾಗುತ್ತಿದ್ದು, ನೌಕರರಿಗೆ ಆಹಾರವನ್ನು ಬೇಯಿಸುತ್ತಿದ್ದಾಗ ಏಕಾಏಕಿ  ಸಿಲಿಂಡರ್ ನಿಂದ  ಗ್ಯಾಸ್ ಸೋರಿಕೆಯಾಗಿ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೋಣಿಯು ನದಿಯಲ್ಲಿ ಮುಳುಗದ ಕಾರಣ, ಯಶಸ್ವಿಯಾಗಿ ನದಿಯ ದಡಕ್ಕೆ ತರಲಾಯಿತು. ಗಾಯಗೊಂಡವರನ್ನು ಮನೇರ್ ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

ಹೆಚ್ಚಿನ ದೋಣಿಗಳು ಈ ಪ್ರದೇಶದಲ್ಲಿ ಮರಳು ಮಾಫಿಯಾ ನಡೆಸುತ್ತಿವೆ ಎಂದು ತಿಳಿದು ಬಂದಿದೆ.

Join Whatsapp