ರಾಜಸ್ಥಾನದಲ್ಲಿ ಆಗಸ್ಟ್ 13 ರಂದು ಭಾರತದ ಮೊದಲ ಡಿಜಿಟಲ್ ಲೋಕ್ ಅದಾಲತ್

Prasthutha|

ನವದೆಹಲಿ: ರಾಜಸ್ಥಾನ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಆರ್ ಎಸ್ಎಲ್ ಎಸ್ ಎ) ಮತ್ತು ಮಹಾರಾಷ್ಟ್ರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಎಂಎಸ್ ಎಲ್ ಎಸ್ ಎ) ಆಗಸ್ಟ್ 13 ರಂದು ಭಾರತದ ಮೊದಲ ಡಿಜಿಟಲ್ ಲೋಕ್ ಅದಾಲತ್ ಅನ್ನು ಆಯೋಜಿಸಿದೆ.

- Advertisement -

ಲೋಕ ಅದಾಲತ್ ಅನ್ನು ಡಿಜಿಟಲೀಕರಣಗೊಳಿಸುವುದರಿಂದ ಸಾಮಾನ್ಯ ಜನರು ತಮ್ಮ ಮನೆಗಳ ಸೌಕರ್ಯಗಳಿಂದ ನ್ಯಾಯವನ್ನು ಪಡೆಯಲು ಅನುಕೂಲವಾಗುತ್ತದೆ. ಅಲ್ಲದೆ ದೇಶಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಇದು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲಿ ಒಂದು ಮೈಲಿಗಲ್ಲನ್ನು ಗುರುತಿಸುತ್ತದೆ ಎನ್ನಲಾಗಿದೆ.

“ಈ ಡಿಜಿಟಲೀಕರಣವು ಎಂಎಸ್ ಎಲ್ ಎಸ್ ಎಗೆ ಅದರ ಬ್ಯಾಕ್ ಮತ್ತು ಆಡಳಿತಾತ್ಮಕ ಕೆಲಸವನ್ನು ಸುಲಭಗೊಳಿಸಲು ಸಹಾಯ ಮಾಡುವುದಲ್ಲದೆ, ಸಾಮಾನ್ಯ ಜನರಿಗೆ ವ್ಯಾಜ್ಯಪೂರ್ವ ಹಂತದಲ್ಲಿರುವ ಪ್ರಕರಣಗಳ ತ್ವರಿತ ಪರಿಹಾರಕ್ಕೆ ಪ್ರಯೋಜನಕಾರಿಯಾಗಿದೆ” ಎಂದು ಮುಂಬೈನ ಎಂಎಸ್ ಎಲ್ ಎಸ್ ಎ ಸದಸ್ಯ ಕಾರ್ಯದರ್ಶಿ ದಿನೇಶ್ ಪಿ ಸುರಾನಾ ಹೇಳಿದ್ದಾರೆ.

- Advertisement -

ವಿಶ್ವದ ಮೊದಲ ಜಸ್ಟೀಸ್ ಟೆಕ್ನಾಲಜಿ ಕಂಪನಿ ಎಂದು ಹೇಳಿಕೊಳ್ಳುವ ಜುಪಿಟೈಸ್ ಈ ಕಾರ್ಯಕ್ರಮದ ಆತಿಥ್ಯ ವಹಿಸಲು ಸಜ್ಜಾಗಿದೆ.

Join Whatsapp