12 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ತಯಾರಿದೆ : ಶೀಘ್ರ ಅನುಮತಿ ಕೊಡಿಯೆಂದು ಕೇಂದ್ರವನ್ನು ಕೋರಿದ ಫೈಝರ್ ಸಂಸ್ಥೆ

Prasthutha|

ನವದೆಹಲಿ : ಕೋವಿಡ್‌ ನಿಯಂತ್ರಣಕ್ಕೆ 12 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ತಯಾರಾಗಿದೆ, ಶೀಘ್ರವೇ ಅದಕ್ಕೆ ಅನುಮತಿ ಕೊಡಿ ಎಂದು ಫೈಝರ್‌ ಸಂಸ್ಥೆ ಸರಕಾರವನ್ನು ಕೋರಿದೆ. ಈ ಲಸಿಕೆ ಭಾರತದಲ್ಲಿ ತ್ವರಿತಗತಿಯಲ್ಲಿ ಹರಡುತ್ತಿರುವ ಕೋವಿಡ್‌ ಎರಡನೇ ಅಲೆ ವೈರಸ್‌ ಗೆ ಅತ್ಯಂತ ಪರಿಣಾಮಕಾರಿಯಾಗಲಿದೆ ಎಂದು ಸಂಸ್ಥೆ ಹೇಳಿದೆ.

- Advertisement -

ಲಸಿಕೆಗೆ ತ್ವರಿತಗತಿಯಲ್ಲಿ ಅನುಮತಿ ನೀಡುವಂತೆ ಸಂಸ್ಥೆಯು ಸರಕಾರದೊಂದಿಗೆ ಮಾತುಕತೆ ಆರಂಭಿಸಿದೆ. ಸರಕಾರ ಅನುಮತಿ ನೀಡಿದರೆ, ಜುಲೈ ಮತ್ತು ಅಕ್ಟೋಬರ್‌ ನಡುವೆ 5 ಕೋಟಿ ಲಸಿಕೆ ವಿತರಿಸುವ ಗುರಿ ಸಂಸ್ಥೆ ಹೊಂದಿದೆ.

ಕಳೆದ ಕೆಲವು ವಾರಗಳಲ್ಲಿ ಈ ಕುರಿತು ಸರಕಾರ ಮತ್ತು ಸಂಸ್ಥೆಯ ಪ್ರತಿನಿಧಿಗಳ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿವೆ.

Join Whatsapp