ಸ್ಮಾರ್ಟ್ ಸಿಟಿ ರ್‍ಯಾಕಿಂಗ್‌ನಲ್ಲಿ ಉತ್ತರಪ್ರದೇಶಕ್ಕೆ ಮೊದಲ ಸ್ಥಾನ | ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್‍

Prasthutha|

ಕೇಂದ್ರ  ಸರಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸ್ಮಾರ್ಟ್ ಸಿಟಿ ಮಿಷನ್‍ ಯೋಜನೆ ಅಡಿ ಪ್ರಕಟಿಸಿದ ವರದಿಯಲ್ಲಿ ಉತ್ತರ ಪ್ರದೇಶವು ಅತ್ಯುತ್ತಮ ರಾಜ್ಯ ಸ್ಥಾನ ಪಡೆದಿದೆ. ನಗರಗಳ ಪೈಕಿ ಇಂದೋರ್ ಮತ್ತು ಸೂರತ್ ಜಂಟಿಯಾಗಿ ಮೊದಲ ಸ್ಥಾನ ಹಂಚಿಕೊಂಡಿವೆ. ಇದರ ಹಿಂದೆಯೇ ಇವತ್ತು ನೆಟ್ಟಿಗರು ಈ ವರದಿ ಕುರಿತು ಟ್ರೋಲ್‍ ಮಾಡುತ್ತಿದ್ದಾರೆ.

- Advertisement -

ಸ್ಮಾರ್ಟ್ ಸಿಟೀಸ್ ಮಿಷನ್, ಅಮೃತ್‍ ಯೋಜನೆ ಮತ್ತು ಪ್ರಧಾನ್ ಮಂತ್ರಿ ಆವಾಸ್ ಯೋಜನೆಗಳ ಆರನೇ ವಾರ್ಷಿಕೋತ್ಸವವನ್ನು ಗುರುತಿಸುವ ಒಂದು ವರ್ಚುವಲ್ ಕಾರ್ಯಕ್ರಮದಲ್ಲಿ,  2020ರ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಾಜ್ಯಗಳ ಪೈಕಿ ಉತ್ತರ ಪ್ರದೇಶವು  ನಂಬರ್‌ 1 ಎಂದೂ, ಮಧ್ಯಪ್ರದೇಶ ಎರಡನೇ ಮತ್ತು ತಮಿಳುನಾಡು ಮೂರನೇ ಸ್ಥಾನದಲ್ಲಿವೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಸ್ತಾವಿತ ಯೋಜನೆಗಳ ಒಟ್ಟು ಮೌಲ್ಯದ ಪೈಕಿ ಶೇ. 22 ವೆಚ್ಚವಾಗಿದೆ. ಉದ್ದೇಶಿತ 100  ಸ್ಮಾರ್ಟ್ ನಗರಗಳ ಪೈಕಿ ಶೇ.52 ಈವರೆಗೆ ಪೂರ್ಣಗೊಂಡಿವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಕೋವಿಡ್‍ ಕಾರಣದಿಂದಾಗಿ ಎದುರಾದ ಸವಾಲುಗಳ ಹೊರತಾಗಿಯೂ, ಸ್ಮಾರ್ಟ್ ಸಿಟೀಸ್ ಮಿಷನ್‌ನಲ್ಲಿ ಸರಾಸರಿ ಮಾಸಿಕ ಖರ್ಚು ಕಳೆದ ವರ್ಷದಲ್ಲಿ ದ್ವಿಗುಣಗೊಂಡಿದೆ ಎಂದು ಸಚಿವಾಲಯ ತಿಳಿಸಿದೆ.

- Advertisement -

ಉತ್ತರಪ್ರದೇಶ ನಂಬರ್ 1 ಎಂಬ ವಿಷಯವೇ ನೆಟ್ಟಿಗರ ಟ್ರೋಲ್‍ಗೆ ಕಾರಣವಾಗಿದೆ. ‘ಹೋ ಯುಪಿ ಚುನಾವಣೆ ಸಲುವಾಗಿ ಈ ನಿರ್ಧಾರವೇ?’ ಎಂದು ಕೆಲವರು, ‘ಯುಪಿಯಲ್ಲಿ ನಗರ ಮೂಲಭೂತ ಸೌಕರ್ಯದ ಹೆಸರಲ್ಲಿ ಸಿಕ್ಕಾಪಟ್ಟೆ ಏನೋ ನಡೆದಿದೆ’ ಎಂದು  ಕೆಲವರು ಅಪಹಾಸ್ಯ  ಮಾಡಿದ್ದಾರೆ.

Join Whatsapp