ದಲಿತ ಮಹಿಳೆ ತಯಾರಿಸಿದ ಆಹಾರ ತಿನ್ನಲು ನಿರಾಕರಿಸಿದ ಸರ್ಕಾರಿ ಶಾಲೆಯ ಮೇಲ್ಜಾತಿ ವಿದ್ಯಾರ್ಥಿಗಳು !

Prasthutha|

ಡೆಹ್ರಾಡೂನ್: ಉತ್ತರಾಖಂಡದ ಸರ್ಕಾರಿ ಶಾಲೆಯೊಂದರಲ್ಲಿ ದಲಿತ ಅಡುಗೆಯವರು ತಯಾರಿಸಿದ ಮಧ್ಯಾಹ್ನದ ಊಟವನ್ನು ಮೇಲ್ಜಾತಿ ವಿದ್ಯಾರ್ಥಿಗಳು ಬಹಿಷ್ಕರಿಸಿದ್ದಾರೆ. ಕೆಲವು ತಿಂಗಳ ಹಿಂದೆಯೂ ಕೂಡ ಇದೇ ರೀತಿಯ ಘಟನೆ ಇಲ್ಲಿ ನಡೆದಿತ್ತು.

- Advertisement -

ಮೇಲ್ಜಾತಿ ಸಮುದಾಯಕ್ಕೆ ಸೇರಿದ 7- 8 ವಿದ್ಯಾರ್ಥಿಗಳು ಸುನೀತಾ ದೇವಿ ಎಂಬ ದಲಿತ ಮಹಿಳೆ ತಯಾರಿಸಿದ ಆಹಾರವನ್ನು ತಿನ್ನಲು ನಿರಾಕರಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್ ನಲ್ಲಿ ಶಾಲೆಯಲ್ಲಿ ಸುಮಾರು 66 ಮೇಲ್ಜಾತಿ ವಿದ್ಯಾರ್ಥಿಗಳು ಸುನೀತಾ ತಯಾರಿಸಿದ ಆಹಾರವನ್ನು ತಿನ್ನಲು ನಿರಾಕರಿಸಿದ್ದರು. ಘಟನೆಯ ಕೆಲವು ದಿನಗಳ ಬಳಿಕ ಚಂಪಾವತ್ ಜಿಲ್ಲೆಯ ಅಧಿಕಾರಿಗಳು ಆಕೆಯ ನೇಮಕಾತಿಯಲ್ಲಿ ಲೋಪವನ್ನು ಉಲ್ಲೇಖಿಸಿ ಆಕೆಯನ್ನು ಕೆಲಸದಿಂದ ವಜಾಗೊಳಿಸಿದ್ದರು.

- Advertisement -

ಕೆಲವು ದಿನಗಳ ನಂತರ ಅದೇ ಶಾಲೆಯ 23 ದಲಿತ ವಿದ್ಯಾರ್ಥಿಗಳು ಸುನೀತಾ ಬದಲಿಗೆ ನೇಮಕಗೊಂಡ ಮೇಲ್ಜಾತಿ ಮಹಿಳೆ ಬೇಯಿಸಿದ ಮಧ್ಯಾಹ್ನದ ಊಟವನ್ನು ತಿನ್ನಲು ನಿರಾಕರಿಸಿದ್ದರು.

ವಜಾಗೊಳಿಸಿದ ನಂತರ ಸುನೀತಾ ಎಸ್ಸಿ/ಎಸ್ಟಿ ಕಾಯ್ದೆ ಮತ್ತು ಐಪಿಸಿಯ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ಆಕೆಯನ್ನು ಪುನಃ ಸೇರಿಸಿಕೊಳ್ಳುವುದಾಗಿ ಜಿಲ್ಲಾಡಳಿತ ಘೋಷಿಸಿತ್ತು.

ಈ ಮಧ್ಯೆ ಮತ್ತೆ ದಲಿತೆ ಎಂಬ ಕಾರಣಕ್ಕಾಗಿ ಮೇಲ್ಜಾತಿ ವಿದ್ಯಾರ್ಥಿಗಳು ಆಹಾರ ತಿನ್ನಲು ನಿರಾಕರಿಸಿದ್ದು, ವಿವಾದ ತಾರಕಕ್ಕೇರಿದೆ.

Join Whatsapp