ಹಜ್ಜ್ ಯಾತ್ರೆ : ಮೇ 9ಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಮೊದಲ ತಂಡ ಪ್ರಯಾಣ

Prasthutha|

ಹಜ್ ಎಂಬುದು ಮುಸಲ್ಮಾನರಿಗೆ ಪ್ರಮುಖ ಮತ್ತು ಮುಖ್ಯ ಕರ್ಮವಾಗಿದೆ. 2024ನೇ ಸಾಲಿನ ಯಾತ್ರೆ ಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ 1944 ಹಜ್ಜಾಜ್ ಗಳು ಹೊರಡುತ್ತಿದ್ದಾರೆ. ಈಗಾಗಲೇ ಅವರೆಲ್ಲರಿಗೂ ರೋಗ ನಿರೋಧಕ ಮುನ್ನೆಚ್ಚರಿಕೆಯಾಗಿ ಲಸಿಕೆ ನೀಡಲಾಗಿದೆ. ಬೆಂಗಳೂರಿನಿಂದ ರಾಜ್ಯ ಹಜ್ ಸಮಿತಿ ಅಧಿಕಾರಿಗಳು ಬಂದು ಇದನ್ನು ನೆರವೇರಿಸಿಕೊಂಡು ಹೋಗಿರುತ್ತಾರೆ. ದ. ಕ. ಜಿಲ್ಲೆಯಿಂದ ಮೇ 9ಕ್ಕೆ ಮೊದಲ ತಂಡದ ಪ್ರಯಾಣ ಬೆಂಗಳೂರಿನಿಂದ ಹೊರಡಲಿದೆ. ತದನಂತರ ದಿನಗಳಲ್ಲಿ ಬೇರೆ ಬೇರೆ ತಂಡಗಳಾಗಿ ಪ್ರಯಾಣ ಹೊರಡಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ಮಾಹಿತಿ ನೀಡಿದರು.

- Advertisement -

ಕಳೆದ ಹಲವು ವರ್ಷಗಳಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಜ್ಜಾಜ್ ಗಳು ಯಾತ್ರೆ ಹೋಗುತ್ತಿದ್ದರು. ಆದರೆ, ಕೋರೋನಾ ನಂತರ ಇದು ಸ್ಥಗಿತಗೊಂಡು, ಬೆಂಗಳೂರು ಹಾಗೂ ಕೇರಳ ಮೂಲಕ ಯಾತ್ರೆ ಕೈಗೊಳ್ಳಲಾಗುತ್ತಿದೆ. ಇದರಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದ್ದರೂ, ಜಿಲ್ಲೆಯ ಹಜ್ ಯಾತ್ರಿಗಳು ದೂರದ ಪ್ರದೇಶದಿಂದ ನಿರ್ಗಮಿಸುತ್ತಿದ್ದಾರೆ. ಮುಂದಿನ ವರ್ಷದಿಂದ ಹಜ್ ಯಾತ್ರೆ ಮಂಗಳೂರು ವಿಮಾನನಿಲ್ದಾಣದಿಂದಲೇ ಆರಂಭಿಸಲು ಕೇಂದ್ರ ಸರಕಾರದೊಂದಿಗೆ ವ್ಯವಹರಿಸಲಾಗುವುದು

ಪ್ರತೀ ದಿನ ಹಜ್ ಯಾತ್ರಾರ್ಥಿಗಳಿಗೆ ಯಾತ್ರೆ ಯ ವಿವರಗಳು ಬರುತ್ತಿರುತ್ತವೆ. ಮುಖ್ಯವಾಗಿ ತಮ್ಮ ಯಾತ್ರೆ ಯ ಮುಂಚಿನ ದಿವಸ ಬ್ಯಾಗೇಜ್ ನೀಡಿ ಹಾಗೂ ಅವರವರ ವರದಿಗಳನ್ನು ಒಪ್ಪಿಸಿ ಪಾಸ್ ಪೋರ್ಟ್ ಪಡೆದುಕೊಳ್ಳಬೇಕಾಗುತ್ತದೆ. ಮರುದಿವಸ ಬೆಂಗಳೂರು ಹಜ್ ಭವನದಿಂದಲೇ ವಿಮಾನ ನಿಲ್ದಾಣ ಕ್ಕೆ ಬಸ್ ವ್ಯವಸ್ಥೆ ಹಜ್ ಸಮಿತಿ ಮಾಡಿದೆ. ಆದುದರಿಂದ ತಮ್ಮ ಪ್ರಯಾಣ ಸಮಯಕ್ಕೆ ತಾವುಗಳು ತಮ್ಮ ವಾಹನದಿಂದ,ಬಸ್ಸಿನಿಂದಲೂ ಅಥವಾ ರೈಲು ನಿಂದಲೂ ತಮಗೆ ಸೂಚಿಸಿದ ಬೆಂಗಳೂರು ಹಜ್ ಭವನಕ್ಕೆ ೪೮ ಗಂಟೆಗಳ ಮುಂಚೆ ತಲುಪುವಂತೆ ಎಲ್ಲರೂ ಎಚ್ಚರ ವಹಿಸಬೇಕು.

- Advertisement -

ಪತ್ರಿಕಾಗೋಷ್ಠಿಯಲ್ಲಿ ಸಯ್ಯದ್ ಅಶ್ರಫ್ ಅಸ್ಸಖಾಫ್ ತಂಬಲ್ ಅದೂರು
ಸದಸ್ಯರು ಕರ್ನಾಟಕ ಹೆಜ್ಜೆ ಸಮಿತಿ, ಎಸ್ ಎಮ್ ರಶೀದ್ ಹಾಜಿ
ಅಧ್ಯಕ್ಷರು ಬ್ಯಾರಿ ಚೇಂಬರ್ ಆಫ್ ಕಾಮರ್ಸ್, ಟಿ.ಎಸ್ ಬಶೀರ್ ಅಲಿ
ಹನೀಫ್ ಗೊಳ್ತಮಜಲು, ಮುಹಮ್ಮದ್ ರಫೀಕ್ ಉಪಸ್ಥಿತರಿದ್ದರು

Join Whatsapp