July 24, 2021

‘ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆ’: ಕಸಾಯಿಖಾನೆಗಳ ನಿಷೇಧ ಹಿಂಪಡೆದ ಉತ್ತರಾಖಂಡ ಹೈಕೋರ್ಟ್

ಉತ್ತರಾಖಂಡ: ಹರಿದ್ವಾರದಲ್ಲಿರುವ ಕಸಾಯಿಖಾನೆಗಳ ಮೇಲಿನ ನಿಷೇಧವನ್ನು ಪ್ರಶ್ನಿಸಿ ಉತ್ತರಾಖಂಡ ಹೈಕೋರ್ಟ್ ಗೆ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ಪುರಷ್ಕರಿಸಿ ಕಸಾಯಿಖಾನೆಗಳ ಮೇಲಿನ ನಿಷೇಧವನ್ನು ರದ್ದುಪಡಿಸಿ ಆದೇಶ ನೀಡಿದೆ. ಕಸಾಯಿಖಾನೆಗಳ ಮೇಲಿನ ನಿಷೇಧವು ಅಲ್ಪಸಂಖ್ಯಾತರ ವಿರುದ್ಧದ ತಾರತಮ್ಯವೆಂದು ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಹರಿದ್ವಾರ ನಿವಾಸಿಗಳು ಉಲ್ಲೇಖಿಸಿದ್ದರು. ಹರಿದ್ವಾರದಲ್ಲಿ ಮುಸ್ಲಿಮ್ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ.

ಕಳೆದ ಮಾರ್ಚಿನಲ್ಲಿ ರಾಜ್ಯ ಸರ್ಕಾರ ಹರಿದ್ವಾರವನ್ನು ಕಸಾಯಿಖಾನೆ ಮುಕ್ತ ಪ್ರದೇಶವೆಂದು ಘೋಷಣೆ ಮಾಡಿತ್ತು ಮತ್ತು ಕಸಾಯಿಖಾನೆಗಳಿಗೆ ನೀಡಲಾಗಿದ್ದ ಆಕ್ಷೇಪಣೆ ಪ್ರಮಾಣಪತ್ರಗಳನ್ನು ಸರ್ಕಾರ ರದ್ದುಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಎರಡು ಅರ್ಜಿ ಸಲ್ಲಿಸಲಾಗಿತ್ತು. ಉತ್ತರಾಖಂಡ ಸರ್ಕಾರ ಯುಪಿ ಮುನ್ಸಿಪಲ್ ಕಾಯ್ದೆ 237 ಅನ್ವಯ ಪುರಸಭೆಯ ನಿಗಮದ ವ್ಯಾಪ್ತಿಯಲ್ಲಿ ಯಾವುದೇ ಕಸಾಯಿಖಾನೆಗಳಿಗೆ ಅವಕಾಶವಿಲ್ಲವೆಂದು ಉಲ್ಲೇಖಿಸಿತ್ತು. ಯುಪಿ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಗೆ ಸರ್ಕಾರ ತಿದ್ದುಪಡಿ ಮಾಡಿದ್ದು, ಪ್ರಾಣಿಗಳ ಹತ್ಯೆಯ ಮೇಲೆ ನಿಷೇಧ ಹೇರಲು ಅವಕಾಶ ಮಾಡಿಕೊಟ್ಟಿತ್ತು.

ಶುಕ್ರವಾರದ ವಿಚಾರಣೆಯಲ್ಲಿ ನ್ಯಾಯಾಲಯವು 2018-2019ರವರೆಗೆ ಭಾರತೀಯ ಆಹಾರ ಪದ್ಧತಿ ಮತ್ತು ಆಹಾರ ಪದ್ಧತಿಗಳ ಭೌಗೋಳಿಕ ವಿತರಣೆಯ ಕುರಿತು ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಗಳ ಆಧಾರದಲ್ಲಿ ಉತ್ತರಾಖಂಡದ ಜನಸಂಖ್ಯೆಯ 72.6% ರಷ್ಟು ಮಾಂಸಾಹಾರಿಗಳು. ಒಟ್ಟಾರೆಯಾಗಿ ಭಾರತೀಯ ಜನಸಂಖ್ಯೆಯ 70% ರಷ್ಟು ಮಾಂಸಾಹಾರಿಗಳು. ಆದ್ದರಿಂದ ಭಾರತೀಯರಲ್ಲಿ ಹೆಚ್ಚಿನವರು ಸಸ್ಯಾಹಾರಿಗಳು ಎಂಬ ಪುರಾಣವನ್ನು ಹುಟ್ಟು ಹಾಕುವುದು ವಿಪರ್ಯಾಸದ ನಡೆ ಇದು ವಿವಿಧ ರಾಜ್ಯಗಳಲ್ಲಿ ಗೋಮಾಂಸ ನಿಷೇಧಕ್ಕೆ ಪ್ರಮುಖ ಸಮರ್ಥನೆಯಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!