ಉತ್ತರಾಖಂಡ | ರೆಸಾರ್ಟ್ ಮಹಿಳಾ ಸಿಬ್ಬಂದಿಯ ಕೊಲೆ ಪ್ರಕರಣ; ಪುತ್ರನ ಬಂಧನದ ಬೆನ್ನಲ್ಲೇ ಬಿಜೆಪಿಯ ನಾಯಕನ ಉಚ್ಚಾಟನೆ

ಡೆಹ್ರಾಡೂನ್: ಪೌರಿಯಲ್ಲಿರುವ ರೆಸಾರ್ಟ್’ನಲ್ಲಿ ಮಹಿಳಾ ಸಿಬ್ಬಂದಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಪುತ್ರನ ಬಂಧನದ ಬೆನ್ನಲ್ಲೇ ಬಿಜೆಪಿ ಮುಖಂಡ ವಿನೋದ್ ಆರ್ಯ ಮತ್ತು ಆತನ ಮತ್ತೊಬ್ಬ ಮಗನನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ರೆಸಾರ್ಟ್’ನ ಮಹಿಳಾ ಸಿಬ್ಬಂದಿಯನ್ನು ಕೊಂದ ಆರೋಪದಲ್ಲಿ ಪೌರಿಯ ಯಮಕೇಶ್ವರ್ ಬ್ಲಾಕ್’ನಲ್ಲಿ ರೆಸಾರ್ಟ್ ಒಂದರ ಮಾಲಕನಾದ ಪುಲ್ಕಿತ್ ಮತ್ತು ಇಬ್ಬರು ಉದ್ಯೋಗಿಗಳನ್ನು ಬಂಧಿಸಲಾಗಿತ್ತು.

- Advertisement -

ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಮಹೇಂದ್ರ ಭಟ್ ಅವರ ಆದೇಶದ ಮೇರೆಗೆ ಪುಲ್ಕಿತ್ ತಂದೆ ವಿನೋದ್ ಆರ್ಯ ಮತ್ತು ಸಹೋದರ ಅಂಕಿತ್ ವಿರುದ್ಧ ಕ್ರಮ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಧ್ಯಮ ಉಸ್ತುವಾರಿ ಮನ್ವೀರ್ ಚೌಹಾನ್ ತಿಳಿಸಿದ್ದಾರೆ.

ಈ ಮಧ್ಯೆ ಕೊಲೆಯ ಪ್ರಕರಣ ಬೆಳಕಿಗೆ ಬಂದ ಒಂದು ದಿನದ ಬಳಿಕ ಉತ್ತರಾಖಂಡ ಜಿಲ್ಲಾಡಳಿತವು ರೆಸಾರ್ಟ್’ನ ಕೆಲವು ಭಾಗಗಳನ್ನು ಬುಲ್ಡೋಝರ್ ಮೂಲಕ ಕೆಡವಿ ಹಾಕಿದೆ.