ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಗ್ಯಾಂಗ್‌ ಸ್ಟರ್‌ ಎನ್‍ ಕೌಂಟರ್

Prasthutha|


ಲಕ್ನೋ: ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದ ಗ್ಯಾಂಗ್‌ ಸ್ಟರ್‌ ನನ್ನು ಉತ್ತರಪ್ರದೇಶದ ವಿಶೇಷ ಪೊಲೀಸ್ ಪಡೆ ಎನ್‍ ಕೌಂಟರ್‌ ನಲ್ಲಿ ಹೊಡೆದುರುಳಿಸಿದೆ.

- Advertisement -

ದೆಹಲಿಯ ನೋಯ್ಡಾ, ಘಾಜಿಯಾಬಾದ್ ಮತ್ತು ಇತರ ಪ್ರದೇಶಗಳಲ್ಲಿ ಜನರನ್ನು ಭಯಭೀತರನ್ನಾಗಿಸಿ ದರೋಡೆಯಲ್ಲಿ ಕುಖ್ಯಾತಿ ಪಡೆದಿದ್ದ ಅನಿಲ್ ದುಜಾನಾ ಸಾವಿಗೀಡಾದ ವ್ಯಕ್ತಿ.

ದುಜಾನಾ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ವಾರದ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ನಂತರ ಅವನು ತನ್ನ ವಿರುದ್ಧ ದಾಖಲಾದ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬನಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದ್ದ. ಅಲ್ಲದೆ ಸಾಕ್ಷಿಯನ್ನು ಕೊಲ್ಲಲು ನಿರ್ಧರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.