ರಾಷ್ಟ್ರೀಯ ‌ಪಕ್ಷಗಳ ಅಪಪ್ರಚಾರಗಳಿಗೆ ಮತದಾರ‌‌ ತಕ್ಕ ಉತ್ತರ ಕೊಡುತ್ತಾನೆ: ಜಾಸೀರ್ ಮೂರ್ನಾಡು

Prasthutha|

►ಮೂರ್ನಾಡುವಿನಲ್ಲಿ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪನವರ ಬೃಹತ್ ರೋಡ್ ಶೋ

- Advertisement -

ಮಡಿಕೇರಿ: ಕ್ಷೇತ್ರದ ಅಭ್ಯರ್ಥಿ ನಾಪಂಡ ಮುತ್ತಪ್ಪನವರ ವಿರುದ್ಧ ರಾಷ್ಟ್ರೀಯ ‌ಪಕ್ಷಗಳು‌ ಮಾಡುತ್ತಿರುವ ಅಪಪ್ರಚಾರಗಳಿಗೆ ಮಡಿಕೇರಿ ಕ್ಷೇತ್ರದ ಮತದಾರರು ಮೇ‌ 10 ರಂದು‌‌ ತಕ್ಕ ಉತ್ತರ ನೀಡಲಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ‌ಘಟಕದ ಅಧ್ಯಕ್ಷ ‌ಜಾಸೀರ್‌ ಮೂರ್ನಾಡು ಅಭಿಪ್ರಾಯ ವ್ಯಕ್ತಪಡಿಸಿದರು.

ಮಡಿಕೇರಿ ಕ್ಷೇತ್ರದ ನಾಪಂಡ‌‌ ಮುತ್ತಪ್ಪನವರು ಮೂರ್ನಾಡುವಿನ ಅಯ್ಯಪ್ಪ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ,ನಂತರ ಮೂರ್ನಾಡು ಪಟ್ಟಣದಲ್ಲಿ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ರೋಡ್ ಶೋ ಮೂಲಕ ಮೂರ್ನಾಡುವಿನಲ್ಲಿ ಮತಯಾಚನೆ ನಡೆಸಿದರು‌.

- Advertisement -

ನಂತರ ಮೂರ್ನಾಡು ಖಾಸಗಿ ಬಸ್ಸ್ ನಿಲ್ದಾಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಪ್ರಾಸ್ತಾವಿಕ ಮಾತಾನಡಿದ ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ‌ಜಾಸೀರ್ ಮೂರ್ನಾಡು, ರಾಷ್ಟ್ರೀಯ ‌ಪಕ್ಷಗಳ ಅಭ್ಯರ್ಥಿಗಳಿಗೆ ಸೋಲಿನ ಭಯದಿಂದ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ.

  ಕೋಮುವಾದ ಹಾಗೂ ಬಿಜೆಪಿಯನ್ನು ವಿರೋಧ ಮಾಡುತ್ತಾ ಬಂದಿರುವ ಕೊಡಗಿನ ಏಕೈಕ ನಾಯಕ ನಾಪಂಡ ಮುತ್ತಪ್ಪ. ಜಾತ್ಯತೀತ ತತ್ವವನ್ನು ಗಟ್ಟಿಯಾಗಿ ತನ್ನ ಜೀವನದಲ್ಲಿ ಅಳವಡಿಸಿಕೊಂಡಿರುವ ನಾಪಂಡ ಮುತ್ತಪ್ಪನವರು ಈ ಬಾರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದಾರೆ. ಇದನ್ನು ಸಹಿಸದ ರಾಷ್ಟ್ರೀಯ ಪಕ್ಷಗಳು ಕುತಂತ್ರ ನಡೆಸಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಆದರೆ ಎಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೊಡಗು ಜಿಲ್ಲೆಗೆ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಜನರು ಮರೆತಿಲ್ಲ ಎಂದು ಜಾಸೀರ್ ಹೇಳಿದರು.

ಕಳೆದ ಎರಡು ದಶಕಗಳಿಂದ ಮಡಿಕೇರಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೇ,ಮತ್ತೊಮ್ಮೆ ಚುನಾವಣೆಗೆ ನಿಂತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಮಣೆ ಹಾಕದೆ, ಆಮದು ಅಭ್ಯರ್ಥಿಯನ್ನು ನಿಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಮತದಾರರು ಬದಲಾವಣೆ ಬಯಸಿದ್ದಾರೆ. ನಾಪಂಡ ಮುತ್ತಪ್ಪನವರು ತಳಮಟ್ಟದಿಂದ ಬೆಳೆದು ಬಂದ ನಾಯಕ. ಕಾರ್ಮಿಕ ಸಂಘಟನೆಯಲ್ಲಿ, ಕಾರ್ಮಿಕರ‌ ಧ್ವನಿಯಾಗಿ ಕೆಲಸ ಮಾಡಿದವರು. ಮಡಿಕೇರಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ವಿಶೇಷ ಯೋಜನೆಯನ್ನು ಕೈಗೊಂಡು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಮಡಿಕೇರಿ ಕ್ಷೇತ್ರದಲ್ಲಿ ಮೂರನೇ ಸ್ಥಾನದಲ್ಲಿ ಇದೆ. ಈ ಬಾರಿ ಬಿಜೆಪಿಯನ್ನು ಜೆಡಿಎಸ್ ಪಕ್ಷ ಸೋಲಿಸಿ, ಮಡಿಕೇರಿ ಕ್ಷೇತ್ರದ ಶಾಸಕರಾಗಿ ನಾಪಂಡ ಮುತ್ತಪ್ಪನವರು ಆಯ್ಕೆಯಾಗಲಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಾಸೀರ್ ಮೂರ್ನಾಡು ವಿಶ್ವಾಸ ವ್ಯಕ್ತಪಡಿಸಿದರು.

ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ‌‌‌ ಮುತ್ತಪ್ಪ‌ ಮಾತನಾಡಿ, ಅಭಿವೃದ್ಧಿಯಲ್ಲಿ ಮಡಿಕೇರಿ ‌ಕ್ಷೇತ್ರ ಹಿಂದುಳಿದಿದೆ.

ಕೊಡಗಿನ ‌ರಸ್ತೆಗಳ ಅಭಿವೃದ್ಧಿಗೆ‌ 5 ಸಾವಿರಕ್ಕೂ ಅಧಿಕ ಕೋಟಿ‌ ರೂ. ಬೇಕಾಗಿದೆ. ಕಳೆದ ಮೂರು ಬಾರಿ ಮಡಿಕೇರಿ ಕ್ಷೇತ್ರದಲ್ಲಿ ಬಿಜೆಪಿ‌ ಶಾಸಕರು ಗೆದ್ದರು ಸಹಾ,ಅಭಿವೃದ್ಧಿ ಮಾಡದೇ‌‌ ನಿರ್ಲಕ್ಷ್ಯ ವಹಿಸಿದ್ದಾರೆ.ಮಡಿಕೇರಿ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಸ್ಥಳೀಯ ಅಭ್ಯರ್ಥಿಗಳಿಲ್ಲ. ಚುನಾವಣೆಯನ್ನು ಎದುರಿಸಲು‌ ಸಾಧ್ಯವಾಗದ ಅಭ್ಯರ್ಥಿಗಳು ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಆದರೆ ಕ್ಷೇತ್ರದ ಮತದಾರರು ಬುದ್ದಿವಂತರು. ನಾವು ತಳಮಟ್ಟದಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಜನರನ್ನು ತಲುಪಿದ್ದೇವೆ. ಎಲ್ಲಾ ರೀತಿಯ ಕೋಮುವಾದವನ್ನು ನಾನು ವಿರೋಧ ಮಾಡುತ್ತಾ ಬೆಳೆದವನು. ಸಾಮಾಜಿಕ ಜಾಲತಾಣದಲ್ಲಿ ನಡೆಸುತ್ತಿರುವ ಅಪಪ್ರಚಾರಗಳಿಗೆ ಗೆಲುವು ಸಿಗಲ್ಲ. ಕೊಡಗಿನ ಜನರು ಸ್ವಾಭಿಮಾನಿಗಳು, ಹೊರಗಿನವರಿಗೆ ಮಣೆ ಹಾಕುವುದಿಲ್ಲ. ಈ ಬಾರಿ ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪವರು ವಿಶ್ವಾಸ ವ್ಯಕ್ತಪಡಿಸಿದರು.

ಅಯ್ಯಪ್ಪ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ರೋಡ್ ಶೋ ಮೂಲಕ ನಾಪಂಡ ಮುತ್ತಪ್ಪನವರು ಮೂರ್ನಾಡು ಪಟ್ಟಣದಲ್ಲಿ ಮತಯಾಚನೆ ನಡೆಸಿದರು.

ರೋಡ್ ಶೋ ನಲ್ಲಿ 1000 ಕ್ಕೂ ಅಧಿಕ ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ಸಂದರ್ಭ ಜಿಲ್ಲಾ ಜೆಡಿಎಸ್ ಹಿರಿಯ ಉಪಾಧ್ಯಕ್ಷ ಬಲ್ಲಚಂಡ ಗೌತಮ್, ಯೂಸುಪ್ ಹಾಜಿ‌ ಕೊಂಡಂಗೇರಿ, ಶಿವದಾಸ್ ನೆಲ್ಲಿಹುದಿಕೇರಿ, ಜಿಲ್ಲಾ ಯುವ ಜೆಡಿಎಸ್ ವಕ್ತಾರ ಜಿನಾಸುದ್ದೀನ್ ಸುಂಟ್ಟಿಕೊಪ್ಪ, ನಾಪಂಡ ರವಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಪಿ.ಎಂ ಮಂಜುನಾಥ್, ಸೈಫುದ್ದೀನ್ ಚಾಮಿಯಾಲ್ ಹಾಗೂ ಜೆಡಿಎಸ್ ಮೂರ್ನಾಡು ಭಾಗದ ಮುಖಂಡರುಗಳು ಇದ್ದರು.

Join Whatsapp