ಉತ್ತರ ಪ್ರದೇಶ । ನಾಪತ್ತೆಯಾಗಿದ್ದ ಬಾಲಕಿ ಬಾಪು ಅಸಾರಾಂ ಆಶ್ರಮದ ಬಳಿ ಶವವಾಗಿ ಪತ್ತೆ; ದೂರು ದಾಖಲು

Prasthutha|

ಲಕ್ನೋ: ಏಪ್ರಿಲ್ 5 ರಂದು ನಾಪತ್ತೆಯಾಗಿದ್ದ 13ರ ಹರೆಯದ ಬಾಲಕಿಯ ಶವ ಬಾಪು ಅಸಾರಾಂ ಅವರ ಆಶ್ರಮದ ಬಳಿ ನಿಲ್ಲಿಸಲಾಗಿದ್ದ ವಾಹನದಲ್ಲಿ ಪತ್ತೆಯಾಗಿದ್ದು, ಪೋಷಕರು 3 ಮಂದಿಯ ವಿರುದ್ಧ ದೂರು ದಾಖಲಿಸಿದ್ದಾರೆ.

- Advertisement -

13 ರ ಹರೆಯದ ಬಾಲಕಿ ಏಪ್ರಿಲ್ 5 ರಂದು ನಾಪತ್ತೆಯಾಗಿದ್ದು, ಸದ್ಯ ಆಕೆಯ ಶವವನ್ನು ಉತ್ತರ ಪ್ರದೇಶದ ಗೊಂಡ ಜಿಲ್ಲೆಯಲ್ಲಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಅಸಾರಾಂ ಬಾಪು ಅವರ ಆಶ್ರಮದಲ್ಲಿ ನಿಲ್ಲಿಸಲಾಗಿದ್ದ ವಾಹನದಲ್ಲಿ ಪತ್ತೆಯಾಗಿದೆ. ಈ ನಿಟ್ಟಿನಲ್ಲಿ ಆಕೆಯ ಪೋಷಕರು 3 ಮಂದಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp