ಇಂಗ್ಲಿಷ್ ಭಾಷೆಗೆ ಹಿಂದಿ ಪರ್ಯಾಯ: ಪ್ರಾದೇಶಿಕ ಭಾಷೆಗಳ ಬಗ್ಗೆ ಅಮಿತ್ ಶಾ ಮತ್ತೆ ‘ಎಡವಟ್ಟು’

Prasthutha|

ನವದೆಹಲಿ: ಪ್ರಾದೇಶಿಕ ಭಾಷೆಯನ್ನು ಸದಾ ಕಡೆಗಣಿಸುವಲ್ಲಿ ಮಹತ್ತರ ಪಾತ್ರ ವಹಿಸುವ ಬಿಜೆಪಿ ಮತ್ತೆ ಎಡವಟ್ಟು ಮಾಡಿದೆ. ದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂಗ್ಲಿಷ್ ಭಾಷೆಗೆ ಪರ್ಯಾಯವಾಗಿ ಹಿಂದಿ ಭಾಷೆ ಬಳಕೆಯಾಗಬೇಕು ಎಂದು ಹೇಳಿದ್ದಾರೆ.

- Advertisement -

ಇಂಗ್ಲಿಷ್ ಭಾಷೆಗೆ ಹಿಂದಿ ಭಾಷೆಯ ಬಳಕೆ ಪರ್ಯಾಯವಾಗಿರಬೇಕು, ಪ್ರಾದೇಶಿಕ ಭಾಷೆಗಳು ಪರ್ಯಾಯವಾಗಬಾರದು ಎಂದು ಅಮಿತ್ ಶಾ ಹೇಳಿದ್ದಾರೆ. ಈ ಹೇಳಿಕೆ ವಿವಾದದ ಕಿಡಿ ಹೊತ್ತಿಸಿದ್ದು ತಮಿಳುನಾಡು ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp