ಅಮೆರಿಕದ ಕೊನೆಯ ಪ್ರಜೆ ಸ್ಥಳಾಂತರದ ಬಳಿಕವೇ ಅಫ್ಘಾನ್ ನಿಂದ ಸೇನೆ ವಾಪಸ್: ಜೋ ಬೈಡನ್

Prasthutha|

ಕಾಬೂಲ್: ಅಫ್ಘಾನಿಸ್ತಾನದಲ್ಲಿರುವ ಕೊನೆಯ ಅಮೆರಿಕ ಪ್ರಜೆ ಸ್ಥಳಾಂತರಿಸುವವರೆಗೂ ಸೈನ್ಯವನ್ನು ಅಲ್ಲಿಯೇ ಉಳಿಸುಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುರುವಾರ ಅಧಿಕೃತವಾಗಿ ಘೋಷಿಸಿದ್ದಾರೆ.

- Advertisement -

ಬುಧವಾರ 5000 ಪ್ರಯಾಣಿಕರು ಕಾಬೂಲ್ ವಿಮಾನ ನಿಲ್ದಾಣದಿಂದ ನಿರ್ಗಮಿಸಿದ್ದಾರೆ. ಮಾತ್ರವಲ್ಲ ತಾಲಿಬಾನ್ ಕೆಲವು ಮಂದಿಯನ್ನು ವಾಯುನೆಲೆಗೆ ತಲುಪದಂತೆ ತಡೆದಿತ್ತು ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ ಪೂರ್ವ ಕಾಬೂಲ್ ನ ಜಲಾಲಾಬಾದ್ ನಗರದಲ್ಲಿ ಅಫ್ಘಾನಿಸ್ತಾನದ ರಾಷ್ಟ್ರೀಯ ಧ್ವಜವನ್ನು ನಗರದ ಜಂಕ್ಷನ್ ನಲ್ಲಿ ಅಳವಡಿಸಲು ಪ್ರಯತ್ನಿಸಿದ್ದ ಪ್ರತಿಭಟನಕಾರರ ಮೇಲೆ ತಾಲಿಬಾನ್ ಬಂಡುಕೋರರು ಗುಂಡು ಹಾರಿಸಿದ್ದಾರೆ. ಈ ಘಟನೆಯಿಂದ ಕನಿಷ್ಠ 3 ಮಂದಿ ಹತರಾಗಿ ಹತ್ತಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

- Advertisement -

ಮಾತ್ರವಲ್ಲ ಹೈಬತುಲ್ಲಾಹ್ ಅಖುಂಝಾದ ಅವರ ನೇತೃತ್ವದಲ್ಲಿ ನೂತನ ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ರಚನೆಯಾಗಲಿದೆಯೆಂದು ತಾಲಿಬಾನ್ ಹಿರಿಯ ನಾಯಕರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ನಿರ್ಗಮಿತ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಅವರು ಯು.ಎ.ಇ ತಲುಪಿರುವುದಾಗಿ ಅಧಿಕೃತವಾಗಿ ದೃಢಪಡಿಸುವ ಮೂಲಕ ಎಲ್ಲಾ ಊಹಪೋಹಗಳಿಗೆ ತೆರೆ ಎಳೆದಿದೆ.



Join Whatsapp