ನಾಲ್ವರು ಪ್ರಗತಿಪರ ಮಹಿಳೆಯರ ಗೆಲುವು | ಅಮೆರಿಕದಲ್ಲೊಂದು ಹೊಸ ಆಶಾಕಿರಣ

Prasthutha|

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಕಾರ್ಯ ಇನ್ನೂ ಮುಗಿದಿಲ್ಲ. ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡೆನ್ ಗೆಲ್ಲುವುದು ಬಹುತೇಕ ಖಚಿತವಾಗುತ್ತಿದೆ. ಅಧ್ಯಕ್ಷರಾಗಿ ಟ್ರಂಪ್ ಅಥವಾ ಬೈಡೆನ್ ಯಾರೇ ಆಗಲಿ, ಅಧ್ಯಕ್ಷರ ಆಯ್ಕೆ ಅಂತಿಮಗೊಳ್ಳುವುದಕ್ಕೆ ಮೊದಲೇ ಕೆಲವೊಂದು ಖುಷಿಯ ವಿಚಾರಗಳಿವೆ. ಅಮೆರಿಕದ ವರ್ಣಬೇಧ ನೀತಿ, ಇಸ್ಲಾಮಾಫೋಬಿಯಾ ವಿರುದ್ಧ ಹೋರಾಡಿ, ಗಮನ ಸೆಳೆದ ನಾಲ್ವರು ಮಹಿಳೆಯರು ವಿಜಯ ಸಾಧಿಸಿರುವುದು ಖುಷಿಯ ಸಂಗತಿ.

- Advertisement -

ಮಿನ್ನೆಪೊಲೀಸ್ ನ ಇಲ್ಹಾನ್ ಒಮರ್, ನ್ಯೂಯಾರ್ಕ್ ನ ಅಲೆಕ್ಸಾಂಡ್ರಿಯಾ ಒಕಾಸಿಯೊ ಕಾರ್ಟೆಜ್, ಮ್ಯಾಸಚೂಯೆಟ್ಸ್ ನ ಅಯನ್ನಾ ಪ್ರೆಸ್ಲೆ, ಮಿಚಿಗನ್ ನ ರಶೀದಾ ಟ್ಲೈಬ್ಲ್ ಮರು ಆಯ್ಕೆಯಾಗುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ. ನಾಲ್ವರು ಮಹಿಳೆಯರೂ ಅಮೆರಿಕದಲ್ಲಿ ಪ್ರಗತಿಪರ ಹೋರಾಟಗಳ ಮೂಲಕ ಗಮನ ಸೆಳೆದು, ರಾಜಕೀಯ ಪ್ರವೇಶಿಸಿದವರು. ಹೀಗಾಗಿ ಇವರ ಗೆಲುವು ಅಮೆರಿಕ ಹಾಗೂ ಜಾಗತಿಕ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಈ ನಾಲ್ವರು ಮಹಿಳೆಯರು 2018ರ ಮಧ್ಯಂತರ ಚುನಾವಣೆಗಳಲ್ಲಿ ಆಯ್ಕೆಯಾದವರು. ಇವರುಗಳು ಅಮೆರಿಕದಲ್ಲಿ ‘ದಿ ಸ್ಕ್ವಾಡ್’ ಎಂದೇ ಪ್ರಸಿದ್ಧರಾದವರು. ‘ದಿ ಸ್ಕ್ವಾಡ್’ ಎಂದು ಕರೆಯಲ್ಪಟ್ಟಿರುವ ಇವರ ಮೇಲೆ ಅಮೆರಿಕ ಅಧ್ಯಕ್ಷ ಟ್ರಂಪ್ ಪದೇಪದೇ ವಾಗ್ದಾಳಿ ನಡೆಸಿದ್ದರು. ಈ ನಾಲ್ವರನ್ನು ‘ಎಒಸಿ ಪ್ಲಸ್ ತ್ರೀ’ ಎಂದು ವ್ಯಂಗ್ಯವಾಡಲಾಗಿತ್ತು.

Join Whatsapp