ರಾಜ್ಯದ ಮುಸ್ಲಿಮರ ರಾಜಕೀಯ ಪರಿಸ್ಥಿತಿ ಶೋಚನೀಯ: ಶಾಫಿ ಸಅದಿ

Prasthutha: November 5, 2020

►► ಮುಸ್ಲಿಮರ ರಾಜಕೀಯ ಸದೃಢತೆಗೆ ಕರೆ

ಚಿಕ್ಕಮಗಳೂರು: ಕರ್ನಾಟಕ ಮುಸ್ಲಿಂ ಜಮಾತ್ ನ ಜಿಲ್ಲಾ ಮಟ್ಟದ ಸಮಿತಿಗಳ ರಚನಾ ಸಮಾವೇಶವು ನಗರದ ಸಹರಾ ಕನ್ವೆ ನ್ಷನ್ ಹಾಲ್ ನಲ್ಲಿ ನ.3ರಂದು ನಡೆಯಿತು. ಜಿಲ್ಲಾಧ್ಯಕ್ಷ ಅಲ್ ಹಾಜ್ ಮುಹಮ್ಮದ್ ಶಾಹಿದ್ ರಜ್ವಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಮುಸ್ಲಿಂ ಜಮಾತ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗು ರಾಜ್ಯ ವಕ್ಫ್ ಮಂಡಳಿ ಸದಸ್ಯ ಮೌಲಾನ ಶೈಖ್ ಶಾಫಿ ಸಅದಿ ಮಾತನಾಡಿ, ರಾಜ್ಯದಲ್ಲಿ ಮುಸ್ಲಿಂ ರಾಜಕೀಯ ನಾಯಕರ ಕೊರತೆ ಇರುವ ಕುರಿತು ನಿರಾಶೆ ವ್ಯಕ್ತಪಡಿಸಿದರು.

“ಮುಸ್ಲಿಮರು ಶೈಕ್ಷಣಿಕ, ರಾಜಕೀಯವಾಗಿ ತೀರಾ ಹಿಂದುಳಿದಿದ್ದಾರೆ. ಈ ಹಿಂದೆ ಲೋಕಸಭೆ ಮತ್ತು ರಾಜ್ಯಸಭೆ ಗಳಲ್ಲಿ ಅನೇಕ ಮುಸ್ಲಿಂ ನಾಯಕರು ಸೇವೆ ಸಲ್ಲಿಸಿದ್ದು, ರಾಜಕೀಯದಲ್ಲಿ ಮುತವರ್ಜಿಯನ್ನು ವಹಿಸಿದ್ದರ ಕಾರಣ ಅಂದು ವಿಧಾನಸಭೆಯಿಂದ ಸಂಸತ್ ಭವನದ ತನಕ ಮುಸ್ಲಿಮರ ಪರ ಧ್ವನಿ ಕೇಳಿಬರುತ್ತಿತ್ತು. ಪ್ರಸ್ತುತ ಬೆರಳೆಣಕೆಯಷ್ಟು ಮುಸ್ಲಿಂ ನಾಯಕರಷ್ಟೆ ಇದ್ದು ಸಮುದಾಯದಲ್ಲಿ ರಾಜಕೀಯ ನಾಯಕರ ಕೊರತೆ ಉಂಟಾಗಿದೆ. ಇದಕ್ಕೆ  ನಮ್ಮಲ್ಲಿನ ವೈಯುಕ್ತಿಕ ದ್ವೇಷಗಳೇ ಕಾರಣವಾಗಿದೆ. ಇಂದಿನ ರಾಜಕೀಯ ಬೆಳವಣಿಗೆಯಲ್ಲಿ ಗ್ರಾಮ ಪಂಚಾಯತಿಯಿಂದ ಹಿಡಿದು, ಲೋಕಸಭೆ ಮತ್ತು ರಾಜ್ಯಸಭೆ ಗಳವರೆಗೂ ಮುಸ್ಲಿಮರ ರಾಜಕೀಯ ಪ್ರವೇಶ ಅತ್ಯವಶ್ಯಕ. ಮುಸ್ಲಿಂ ಪ್ರಾಮಾಣಿಕ ನಾಯಕರನ್ನು ಗುರುತಿಸಿ ಸಮುದಾಯದ ಹಿತದೃಷಿಯನ್ನು ಕಾಪಾಡಲು ಮುಸ್ಲಿಮರ ಏಳಿಗೆಗಾಗಿ ರಾಜಕೀಯ ಪ್ರವೃತ್ತಿಯನ್ನು ಬಲಿಷ್ಟ ಮತ್ತು ಸದೃಢಗೊಳಿಸಲು ಪ್ರತಿಯೊಂದು ಸಂಘಸಂಸ್ಥೆಗಳು ಮುಂದಾಗಬೇಕು” ಎಂದು ಶಾಫಿ ಸಅದಿ ಹೇಳಿದರು.

 ಇದೇ ಸಂದರ್ಭದಲ್ಲಿ ಮಾತನಾಡಿದ ಅಲ್ ಹಾಜ್ ಮುಹಮ್ಮದ್ ಶಾಹಿದ್ ರಜ್ವಿ, ಮುಂದಿನ ಹದಿನೈದು ದಿನಗಳ ಅವಧಿಯಲ್ಲಿ ಜಿಲ್ಲಾದ್ಯಂತ ಪ್ರತಿ ತಾಲೂಕುವಾರು ,ಹೋಬಳಿ, ಗ್ರಾಮ, ಹಾಗು ಬೂತ್ ಮಟ್ಟದಲ್ಲಿ ಕರ್ನಾಟಕ ಮುಸ್ಲಿಂ ಜಮಾತ್ ಸಮಿತಿಗಳನ್ನು ರಚಿಲಾಗುವುದು ಎಂದು ಘೋಷಿಸಿದರು.

ಸಮಾರಂಭದಲ್ಲಿ ಜಿಲ್ಲಾದ್ಯಂತ ಸುನ್ನಿ ಮಸೀದಿಗಳ ಪದಾಧಿಕಾರಿಗಳು, ವಿವಿಧ ಸುನ್ನಿ ಸಂಘಟನೆಗಳ ಪದಾಧಿಕಾರಿಗಳು, ಮುಸ್ಲಿಂ ಮುಖಂಡರು, ಉಲೇಮಾ, ಉಮಾರ ಗಳ ಜೊತೆಗೆ ರಾಜ್ಯ ಸಮಿತಿಯ ಸದಸ್ಯ ಯೂಸುಫ್ ಹಾಜಿ,  ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಟಿ ಎಂ ನಾಸಿರ್,  ಝಾಕಿರ್ ಹುಸೈನ್,  ಶಬ್ಬೀರ್ ಅಹಮದ್, ಆರಿಫ್ ಅಲಿ ಖಾನ್,  ಮುನೀರ್ ಅಹ್ಮದ್ ಇನ್ನಿತರೆ ಮುಖಂಡರು ಉಪ್ಥಿತರಿದ್ದರು ಎಂದು ಜಿಲ್ಲಾ ಸಮಿತಿ ಕಾರ್ಯದರ್ಶಿಯಾದ ಅಲ್ ಹಾಜ್ ಫೈರೋಜ್ ಅಹಮದ್ ರಜ್ವಿ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಮುಸ್ಲಿಂ ಜಮಾತ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗು ರಾಜ್ಯ ವಕ್ಫ್ ಮಂಡಳಿ ಸದಸ್ಯ ಮೌಲಾನ ಶೈಖ್ ಶಾಫಿ ಸಅದಿ ಮಾತನಾಡಿ, ರಾಜ್ಯದಲ್ಲಿ ಮುಸ್ಲಿಂ ರಾಜಕೀಯ ನಾಯಕರ ಕೊರತೆ ಇರುವ ಕುರಿತು ನಿರಾಶೆ ವ್ಯಕ್ತಪಡಿಸಿದರು.

“ಮುಸ್ಲಿಮರು ಶೈಕ್ಷಣಿಕ, ರಾಜಕೀಯವಾಗಿ ತೀರಾ ಹಿಂದುಳಿದಿದ್ದಾರೆ. ಈ ಹಿಂದೆ ಲೋಕಸಭೆ ಮತ್ತು ರಾಜ್ಯಸಭೆ ಗಳಲ್ಲಿ ಅನೇಕ ಮುಸ್ಲಿಂ ನಾಯಕರು ಸೇವೆ ಸಲ್ಲಿಸಿದ್ದು, ರಾಜಕೀಯದಲ್ಲಿ ಮುತವರ್ಜಿಯನ್ನು ವಹಿಸಿದ್ದರ ಕಾರಣ ಅಂದು ವಿಧಾನಸಭೆಯಿಂದ ಸಂಸತ್ ಭವನದ ತನಕ ಮುಸ್ಲಿಮರ ಪರ ಧ್ವನಿ ಕೇಳಿಬರುತ್ತಿತ್ತು. ಪ್ರಸ್ತುತ ಬೆರಳೆಣಕೆಯಷ್ಟು ಮುಸ್ಲಿಂ ನಾಯಕರಷ್ಟೆ ಇದ್ದು ಸಮುದಾಯದಲ್ಲಿ ರಾಜಕೀಯ ನಾಯಕರ ಕೊರತೆ ಉಂಟಾಗಿದೆ. ಇದಕ್ಕೆ  ನಮ್ಮಲ್ಲಿನ ವೈಯುಕ್ತಿಕ ದ್ವೇಷಗಳೇ ಕಾರಣವಾಗಿದೆ. ಇಂದಿನ ರಾಜಕೀಯ ಬೆಳವಣಿಗೆಯಲ್ಲಿ ಗ್ರಾಮ ಪಂಚಾಯತಿಯಿಂದ ಹಿಡಿದು, ಲೋಕಸಭೆ ಮತ್ತು ರಾಜ್ಯಸಭೆ ಗಳವರೆಗೂ ಮುಸ್ಲಿಮರ ರಾಜಕೀಯ ಪ್ರವೇಶ ಅತ್ಯವಶ್ಯಕ. ಮುಸ್ಲಿಂ ಪ್ರಾಮಾಣಿಕ ನಾಯಕರನ್ನು ಗುರುತಿಸಿ ಸಮುದಾಯದ ಹಿತದೃಷಿಯನ್ನು ಕಾಪಾಡಲು ಮುಸ್ಲಿಮರ ಏಳಿಗೆಗಾಗಿ ರಾಜಕೀಯ ಪ್ರವೃತ್ತಿಯನ್ನು ಬಲಿಷ್ಟ ಮತ್ತು ಸದೃಢಗೊಳಿಸಲು ಪ್ರತಿಯೊಂದು ಸಂಘಸಂಸ್ಥೆಗಳು ಮುಂದಾಗಬೇಕು” ಎಂದು ಶಾಫಿ ಸಅದಿ ಹೇಳಿದರು.

 ಇದೇ ಸಂದರ್ಭದಲ್ಲಿ ಮಾತನಾಡಿದ ಅಲ್ ಹಾಜ್ ಮುಹಮ್ಮದ್ ಶಾಹಿದ್ ರಜ್ವಿ, ಮುಂದಿನ ಹದಿನೈದು ದಿನಗಳ ಅವಧಿಯಲ್ಲಿ ಜಿಲ್ಲಾದ್ಯಂತ ಪ್ರತಿ ತಾಲೂಕುವಾರು ,ಹೋಬಳಿ, ಗ್ರಾಮ, ಹಾಗು ಬೂತ್ ಮಟ್ಟದಲ್ಲಿ ಕರ್ನಾಟಕ ಮುಸ್ಲಿಂ ಜಮಾತ್ ಸಮಿತಿಗಳನ್ನು ರಚಿಲಾಗುವುದು ಎಂದು ಘೋಷಿಸಿದರು.

ಸಮಾರಂಭದಲ್ಲಿ ಜಿಲ್ಲಾದ್ಯಂತ ಸುನ್ನಿ ಮಸೀದಿಗಳ ಪದಾಧಿಕಾರಿಗಳು, ವಿವಿಧ ಸುನ್ನಿ ಸಂಘಟನೆಗಳ ಪದಾಧಿಕಾರಿಗಳು, ಮುಸ್ಲಿಂ ಮುಖಂಡರು, ಉಲೇಮಾ, ಉಮಾರ ಗಳ ಜೊತೆಗೆ ರಾಜ್ಯ ಸಮಿತಿಯ ಸದಸ್ಯ ಯೂಸುಫ್ ಹಾಜಿ,  ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಟಿ ಎಂ ನಾಸಿರ್,  ಝಾಕಿರ್ ಹುಸೈನ್,  ಶಬ್ಬೀರ್ ಅಹಮದ್, ಆರಿಫ್ ಅಲಿ ಖಾನ್,  ಮುನೀರ್ ಅಹ್ಮದ್ ಇನ್ನಿತರೆ ಮುಖಂಡರು ಉಪಸ್ಥಿತರಿದ್ದರು ಎಂದು ಜಿಲ್ಲಾ ಸಮಿತಿ ಕಾರ್ಯದರ್ಶಿ ಅಲ್ ಹಾಜ್ ಫೈರೋಜ್ ಅಹಮದ್ ರಜ್ವಿ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!