ಗುರುವಾರದಂದು ಹೊಸ ಕ್ರೀಡಾಕೂಟವೊಂದನ್ನು ಪ್ರಕಟಿಸಲಿರುವ ಸೌದಿ ಅರೇಬಿಯಾ

Prasthutha: November 5, 2020

ರಿಯಾದ್: ಸೌದಿ ಅರೇಬಿಯಾವು ಗುರುವಾರದಂದು ಅಂತಾರಾಷ್ಟ್ರೀಯ ಕ್ರೀಡಾಕೂಟವೊಂದನ್ನು ಅನಾವರಣಗೊಳಿಸಲು ಸಿದ್ಧವಾಗಿದ್ದು, ಈ ಮಾದರಿಯ ಕ್ರೀಡಾ ಕೂಟವು ಮೊದಲ ಬಾರಿಗೆ ಇಲ್ಲಿ ನಡೆಯಲಿದೆ ಎಂದು ಕ್ರೀಡಾ ಸಚಿವಾಲಯ ಬುಧಾವಾರದಂದು ತಿಳಿಸಿದೆ.

ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ರ ಬೆಂಬಲದೊಂದಿಗೆ ಇತ್ತೀಚೆಗೆ ರಾಜಪ್ರಭುತ್ವವು ಆಯೋಜಿಸಿದ ಅಂತಾರಾಷ್ಟ್ರೀಯ ಕ್ರೀಡಾಕೂಟಗಳ ಸರಣಿಯ ಭಾಗವಾಗಿಯೇ ಈ ಕ್ರೀಡಾ ಕೂಟವು ನಡೆಯಲಿದೆ ಎಂದು ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದೆರಡು ವರ್ಷಗಳಿಂದ ಅಂತಾರಾಷ್ಟ್ರೀಯ ಚಾಂಪಿಯನ್ ಶಿಪ್ ಗಳು, ಪಂದ್ಯಾವಳಿಗಳು ಮತ್ತು ಸ್ಪರ್ಧೆಗಳನ್ನು ಸೌದಿ ಅರೇಬಿಯಾದಲ್ಲಿ ಆಯೋಜಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಫಾರ್ಮುಲಾ ಇ ಮತ್ತು ಡಕರ್ ರ್ಯಾಲಿ, ಸ್ಪ್ಯಾನಿಶ್ ಸೂಪರ್ ಕಪ್, ಇಟಾಲಿಯನ್ ಸೂಪರ್ ಕಪ್, ಅಂತಾರಾಷ್ಟ್ರೀಯ ಟೆನಿಸ್ ಚಾಂಪಿಯನ್ ಶಿಪ್ಸ್, ಮೊದಲ ಮಹಿಳಾ ಡಬ್ಲ್ಯುಡಬ್ಲ್ಯುಇ ಪಂದ್ಯ, ಪುರುಷರು ಮತ್ತು ಮಹಿಳೆಯರಿಗಾಗಿ ಯುರೋಪಿಯನ್ ಗಾಲ್ಪ್, ಮುಕ್ತ ಕುಸ್ತಿ, ಅಂತಾರಾಷ್ಟ್ರೀಯ ಕುದುರೆ ಸವಾರಿ ಫೆಡರೇಶನ್ ನಲ್ಲಿ ಮುಕ್ತ ಕುಸ್ತಿ, ಜಗತ್ತಿನ ಅತ್ಯಂತ ಮೌಲ್ಯಯುತ ಸ್ಪರ್ಧೆಯೆಂದು ಪರಿಗಣಿಸಲಾಗುವ ಸೌದಿಯಾ ಕುದುರೆಸವಾರಿ ಕಪ್ ಮತ್ತು 2019ರಲ್ಲಿ ಐತಿಹಾಸಿಕ ಅದ್ ದಿರಿಯಾಹ್ ಬಾಕ್ಸಿಂಗ್ ಸ್ಪರ್ಧೆಗಳನ್ನು ಸೌದಿ ಅರೇಬಿಯಾದಲ್ಲಿ ನಡೆಸಿರುವುದಾಗಿ ಸಚಿವಾಲಯದ ಪ್ರಕಟನೆ ಉಲ್ಲೇಖಿಸಲಾಗಿದೆ. ಏಶ್ಯನ್ ಗೇಮ್ಸ್ 2030 ಮತು ಏಶ್ಯ ಫುಟ್ಬಾಲ್ ಫೈನಲ್ಸ್ 2027 ಇವುಗಳ ಆತಿಥ್ಯವನ್ನು ವಹಿಸುವುದಕ್ಕಾಗಿ ಸೌದಿ ಅರೇಬಿಯಾ ಬಿಡ್ ಸಲ್ಲಿಸಿದೆ ಎಂದು ಹೇಳಿಕೆ ತಿಳಿಸಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!