May 14, 2021

ಕೊರೋನ ಲಸಿಕೆ ಹಾಕಿಕೊಂಡವರು ಮಾಸ್ಕ್ ಧರಿಸುವ ಅಗತ್ಯವಿಲ್ಲ : ಹೊಸ ಮಾರ್ಗಸೂಚಿ ಪ್ರಕಟಿಸಿದ ಅಮೇರಿಕಾ

ವಾಷಿಂಗ್ಟನ್: “ಸಂಪೂರ್ಣವಾಗಿ   ಕೊವಿಡ್ ಲಸಿಕೆ ಹಾಕಿಸಿಕೊಂಡ ಜನರು ಮಾಸ್ಕ್‌ ಧರಿಸದೇ ಅಥವಾ ದೈಹಿಕ ಅಂತರ ಕಾಪಾಡಿಕೊಳ್ಳದೇ ಚಟುವಟಿಕೆಗಳನ್ನು ಪುನರಾರರಂಭಿಸಬಹುದು” ಎಂದು ಅಮೆರಿಕಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಸೂಚಿಸಿದೆ.

“ಪೂರ್ಣ ಮಟ್ಟದಲ್ಲಿ ಲಸಿಕೆ ಹಾಕಿಸಿಕೊಂಡ ಜನರು ಮಾಸ್ಕ್‌ ಧರಿಸುವ ಅಗತ್ಯವಿಲ್ಲ. ಅಮೇರಿಕಾದೊಳಗೆ ಸಂಚರಿಸುವ ಪ್ರಯಾಣಿಕರು ಪ್ರಯಾಣದ ಮೊದಲು ಅಥವಾ ಬಳಿಕ ಕ್ವಾರಂಟೈನ್‌ಗೆ ಒಳಗಾಗುವ ಅವಶ್ಯಕತೆ ಇಲ್ಲ. ತೀವ್ರ ಅನಾರೋಗ್ಯ ಹಾಗೂ ಸಾವನ್ನು ತಡೆಗಟ್ಟುವಲ್ಲಿ ಲಸಿಕೆ ಪರಿಣಾಮಕಾರಿ ಎನಿಸಿದೆ” ಎಂದು ತಿಳಿಸಿದೆ. ಸಿಡಿಸಿ ಸಲಹೆ ನೀಡಿದ ಬೆನ್ನಲ್ಲೇ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್‌‌ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌‌‌ ಮಾಸ್ಕ್‌ ಧರಿಸದೇಯೇ ಶ್ವೇತಭವನದ ರೋಸ್‌ ಗಾರ್ಡನ್‌ನಲ್ಲಿ ವರದಿಗಾರರ ಮುಂದೆ ಹಾಜರಾಗಿದ್ದಾರೆ.

ಬಿಡೆನ್‌ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಇದೊಂದು ದೊಡ್ಡ ಮೈಲಿಗಲ್ಲು ಎಂದು ನಾನು ಭಾವಿಸುತ್ತೇನೆ. ನಾವು ಅಮೇರಿಕನ್ನರಿಗೆ ಶೀಘ್ರವೇ ಲಸಿಕೆ ಹಾಕುವಲ್ಲಿ ಯಶಸ್ವಿಯಾದ ಕಾರಣ ಇದು ಸಾಧ್ಯವಾಗಿದೆ” ಎಂದಿದ್ದಾರೆ. “ಸಂಪೂರ್ಣವಾಗಿ ಕೊರೊನಾ ಲಸಿಕೆ ಹಾಕಿಕೊಂಡವರಿಗೆ ಕೊರೊನಾ ಸೋಂಕು ತಗುಲುವ ಕಡಿಮೆ ಅಪಾಯ ಹೊಂದಿರುತ್ತಾರೆ. ಹಾಗಾಗಿ ಸಂಪೂರ್ಣ ಲಸಿಕೆ ಹಾಕಿಸಿಕೊಂಡವರು ಮಾಸ್ಕ್‌‌ ಧರಿಸುವ ಅಗತ್ಯವಿಲ್ಲ. ಆದರೆ, ಲಸಿಕೆ ಹಾಕಿಸಿಕೊಳ್ಳದವರು ಹಾಗೂ ಮೊದಲ ಡೋಸ್‌‌ ಹಾಕಿಸಿಕೊಳ್ಳದಿದ್ದಲ್ಲಿ ಮಾಸ್ಕ್‌ ಧರಿಸಬೇಕು” ಎಂದಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!