UPSC ಪರೀಕ್ಷೆ ಫಲಿತಾಂಶ: ಶಾಕೀರ್ ಅಹ್ಮದ್ 583ನೇ ರ್‍ಯಾಂಕ್

Prasthutha|

ಬೆಳಗಾವಿ: ಯುಪಿಎಸ್‌ ಸಿ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ರಾಮಾಪುರಸೈಟ್ ಗ್ರಾಮದ ಶಾಕೀರ್ ಅಹ್ಮದ್ 583ನೇ ರ್‍ಯಾಂಕ್ ಪಡೆದಿದ್ದಾರೆ.

2015ರಲ್ಲಿ ಕೆಪಿಎಸ್‌ ಸಿ ಪರೀಕ್ಷೆ ಬರೆದು ಹೆಚ್ಚಿನ ಅಂಕದೊಂದಿಗೆ ತೇರ್ಗಡೆಯಾಗಿದ್ದ ಶಾಕೀರ್ ಹುಬ್ಬಳ್ಳಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸರ್ಕಾರಿ ಅಧಿಕಾರಿಯಾಗಿ ಕೆಲಸದಲ್ಲಿದ್ದುಕೊಂಡೇ ಓದಿ ಯುಪಿಎಸ್‌ಸಿಯಲ್ಲಿ ಶಾಕೀರ್ ಸಾಧನೆ ಮಾಡಿದ್ದಾರೆ. ಯುಪಿಎಸ್‌ಸಿಯಲ್ಲಿ ಸಾಧನೆಗೈದಿರುವ ಶಾಕೀರ್ ಅವರು ಕೃಷಿ ಇಲಾಖೆಯ ನಿವೃತ್ತ ನೌಕರ ಅಕ್ಬರ್‌ ಸಾಬ್ ತೋಂಡಿಖಾನ್ ಅವರ ಪುತ್ರರಾಗಿದ್ದಾರೆ.

- Advertisement -