ಸೆ. 27ಕ್ಕೆ ಭಾರತ್ ಬಂದ್ | ಸಂಪೂರ್ಣ ಸ್ತಬ್ಧ ಸಾಧ್ಯತೆ

Prasthutha|

ನವದೆಹಲಿ: ಒಕ್ಕೂಟ ಸರಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಸೆ. 27ರ ಭಾರತ್ ಬಂದ್ ಗೆ ಇದೀಗಾಗಲೇ 100 ಕ್ಕೂ ಹೆಚ್ಚು ಸಾಮಾಜಿಕ ಸಂಘಟನೆಗಳೂ, ಹಲವಾರು ಪಕ್ಷಗಳು ಬೆಂಬಲ ನೀಡಿವೆ.

ದೇಶದಾದ್ಯಂತ ಪ್ರತಿಭಟನೆಗೆ ಸಜ್ಜಾಗಿರುವ 500ಕ್ಕೂ ಹೆಚ್ಚು ರೈತ ಸಂಘಟನೆಗಳು ಕೆಂದ್ರ ಒಕ್ಕೂಟ ಸರಕಾರದ ವಿರುದ್ಧ ಪ್ರತಿಭಟನೆ, ಜಾಥಾ ನಡೆಸಲಿವೆ ಎಂದು ತಿಳಿದು ಬಂದಿದೆ. ಅಲ್ಲದೆ ರೈತರ ರಣಕಹಳೆಗೆ ಭಾರತ ಸಂಪೂರ್ಣ ಸ್ಥಬ್ದವಾಗುವ ಸಾದ್ಯತೆ ಇದೆ ಎನ್ನಲಾಗಿದೆ.

- Advertisement -

ಭಾರತ್ ಬಂದ್ ಗೆ ಹೋಟೆಲ್ , ಸಾರಿಗೆ, ಲಾರಿ ಮಾಲಕರು ಇದೀಗಾಗಲೇ ನೈತಿಕ ಬೆಂಬಲ ನೀಡಲು ನಿರ್ಧರಿಸಿದ್ದು, ಅಗತ್ಯ ಸೇವೆಗಳು ಎಂದಿನಂತೆ ಇರಲಿವೆ ಎನ್ನಲಾಗಿದೆ. ಪರಿಸ್ಥಿತಿ ಕ್ಲಿಷ್ಟಕರವಾಗಿದ್ದರೆ ಕೆ ಎಸ್ ಆರ್ ಟಿಸಿ ಬಸ್ ಸೇವೆಯನ್ನು ಸ್ಥಗಿತಗೊಳಿಸುತ್ತೇವೆ ಎಂದು ಕೆಎಸ್‌ಆರ್‌ಟಿಸಿ ನೌಕರರ ಒಕ್ಕೂಟದ ಅಧ್ಯಕ್ಷ ಆರ್‌. ಚಂದ್ರಶೇಖರ್‌ ತಿಳಿಸಿದ್ದಾರೆ

- Advertisement -