ಯುಎಇ ರಜಾ ದಿನಗಳಲ್ಲಿ ಬದಲಾವಣೆ ? ಸ್ಪಷ್ಟನೆ ನೀಡಿದ WAM

Prasthutha|

ಯುಎಇ: ಯುಎಇ ರಜಾ ದಿನಗಳಲ್ಲಿ ಬದಲಾವಣೆಯಾಗಿದ್ದು ಶುಕ್ರವಾರ ಮತ್ತು ಶನಿವಾರದ ವಾರಾಂತ್ಯ ದಿನವನ್ನು ರಜಾ ದಿನವನ್ನು ಶನಿವಾರ ಮತ್ತು ಆದಿತ್ಯವಾರಕ್ಕೆ ಮಾರ್ಪಾಡು ಮಾಡಲಾಗಿದೆ ಎನ್ನುವ ಸುದ್ದಿಗೆ UAEಯ ವಾರ್ತಾ ಏಜೆನ್ಸಿ(WAM) ಸ್ಪಷ್ಟನೆ ನೀಡಿದೆ.

ಯುಎಇ ವಾರಾಂತ್ಯ ರಜಾ ದಿನಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ವಾಮ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮೊಹಮ್ಮದ್ ಜಲಾಲ್ ಅಲ್ ರೈಸಿ ಹೇಳಿದ್ದಾರೆ. ಅಲ್ಲದೇ ಸುಳ್ಳು ವದಂತಿಗಳಿಗೆ ಕಿವಿ ಕೊಡಬೇಡಿ, ಈ ಸುದ್ದಿಗಳಿಗೆ ಆಧಾರ ಇಲ್ಲ ಎಂದಿದ್ದಾರೆ.

- Advertisement -